7

‘ವೀರಶೈವ–ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಿ’

Published:
Updated:

ಕುರುಗೋಡು: ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕೇದಾರನಾಥ ಪೀಠದ ಭೀಮಾಶಂಕರಲಿಂಗ ಭಗವತ್ಪಾದರು ತಿಳಿಸಿದರು.

ಪಟ್ಟಣದ ಎನ್‍.ಎಂ.ಬಸವರಾಜಸ್ವಾಮಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ವೀರಶೈವ ಲಿಂಗಾಯತ ತತ್ವ ಮಾನವತಾವಾದಿ ಪ್ರಾಧಾನ್ಯತೆ ನೋಡಿ ಧರ್ಮದ ಮಾನ್ಯತೆ ನೀಡಿದ್ದಾಗಿದೆ.

ದೇಶದಲ್ಲಿ ವೀರಶೈವ ಲಿಂಗಾಯತರ ಜನಸಂಖ್ಯೆ ಒಟ್ಟು 5 ಕೋಟಿ ಇದೆ. ಹಾಗಾಗಿ ವೀರಶೈವ ಲಿಂಗಾಯತ ಧರ್ಮ ಒಂದೇ, ಬೇರೆ ಬೇರೆ ಅಲ್ಲ. ಜೈನ, ಬೌದ್ಧ ಧರ್ಮಕ್ಕೆ ನೀಡಿರುವಂತೆ ಕೇಂದ್ರ ಸರ್ಕಾರ, ವೀರಶೈವ–ಲಿಂಗಾಯತ ಧರ್ಮಕ್ಕೆ ಹಿಂದೂಯುಕ್ತ ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry