ಗುರುವಾರ , ಫೆಬ್ರವರಿ 25, 2021
29 °C

ಪ್ರತಾಪ್ ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಆತನನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯಬೇಕು: ಸಚಿವ ವಿನಯ ಕುಲಕರ್ಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಾಪ್ ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಆತನನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯಬೇಕು: ಸಚಿವ ವಿನಯ ಕುಲಕರ್ಣಿ

ಧಾರವಾಡ: ‘ಸಂಸದ ಪ್ರತಾಪ್‌ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಮೊದಲು ಆತನನ್ನು ಹುಚ್ಚಾಸ್ಪತ್ರೆಗೆ ಕರೆದುಕೊಂಡು ಹೋಗಬೇಕು’ ಎಂದು ಸಚಿವ ವಿನಯ ಕುಲಕರ್ಣಿ ಲೇವಡಿ ಮಾಡಿದರು.

ಧಾರವಾಡದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರ ವ್ಯಕ್ತಿತ್ವ ಜನತೆಗೆ ತಿಳಿಯುತ್ತಿದೆ’ ಎಂದರು.

ಒನಕೆ ಓಬವ್ವ, ಚೆನ್ನಮ್ಮಗೆ ಅವಮಾನ ಮಾಡಿದಾಗ ಬಿಜೆಪಿ ನಾಯಕರು ಮಾತನಾಡಿದಾಗಲೂ ಬಿಜೆಪಿ ನಾಯಕರಾರು ಚಕಾರ ಎತ್ತಿಲ್ಲ. ಬೇರೆ ಪಕ್ಷದವರಾದರೂ ಮಾಡಿದ್ದರೆ ಈಗಾಗಲೇ ಮುತ್ತಿಗೆ ಪ್ರತಿಭಟನೆಗಳನ್ನು ರಾಜ್ಯಾದ್ಯಂತ ಮಾಡ್ತಾಇದ್ರು. ಆದರೆ, ಈಗ ಪ್ರಹ್ಲಾದ್ ಜೋಶಿ ಅವರು ತುಟಿ ಬಿಚ್ಚುತ್ತಿಲ್ಲ. ಕಲಬುರ್ಗಿ ಅವರ ಹತ್ಯೆ ಆದಾಗಲೂ ಬಿಜೆಪಿ ಮಾತಾಡಿಲ್ಲ. ಈಗ ಚುನಾವಣೆ ಹತ್ತಿರವಾದಂತೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.