ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಯೊಳಗೆ ಕಾಫಿ ಘಮ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಆಗ ತಾನೆ ಬಿದ್ದ ಮಳೆಯಿಂದಾಗಿ ಮಣ್ಣಿನ ವಾಸನೆ ಸುತ್ತಲೂ ಪಸರಿತ್ತು. ಮೈಮನ ಪುಳಕಗೊಳಿಸುವ ಆ ಮಣ್ಣಿನ ವಾಸನೆಯ ಜತೆಗೆ ಹದವಾಗಿ ಬೆರೆತ ಕಾಫಿಯ ಪರಿಮಳ ಕಾಫಿಪ್ರಿಯರನ್ನು ‘ಕಾಫಿ ಸಂತೆ’ಗೆ ಸ್ವಾಗತ ಕೋರುವಂತಿತ್ತು. ಇಂಥದೊಂದ್ದು ವಾತಾವರಣ ನಿರ್ಮಾಣವಾಗಿದ್ದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ (ಸಿಕೆಪಿ). ಈಚೆಗೆ ಸಿಕೆಪಿಯಲ್ಲಿ ನಡೆದ ಮೂರು ದಿನಗಳ ‘ಕಾಫಿಸಂತೆ’ ಬಂದವರ ಮನಮುದಗೊಳಿಸಿತು.

ಸಂತೆಯಲ್ಲಿ 60ಕ್ಕೂ ಹೆಚ್ಚು ಮಳಿಗೆಗಳು ಕಾಫಿಪ್ರಿಯರ ಮನಗೆದ್ದವು. ತರಹೇವಾರಿ ಕಾಫಿಯ ಸ್ವಾದಗಳು, ಅವುಗಳನ್ನು ಮಾಡುವ ವಿಧಾನ, ಕಾಫಿಯ ಜತೆಗೆ ಹದವಾಗಿ ಹೊಂದುವ ತಿನಿಸುಗಳ ಕುರಿತು ಕಾಫಿ ಸಂತೆಯಲ್ಲಿ ಪ್ರಾತ್ಯಕ್ಷಿಕೆಯೂ ಇತ್ತು. ಅಷ್ಟೇ ಅಲ್ಲ ಕಾಫಿ ಕುರಿತಂತೆ ಅಂತರರಾಷ್ಟ್ರೀಯ ಮಟ್ಟದ ತಜ್ಞರಿಂದ ಚರ್ಚಾಗೋಷ್ಠಿಯೂ ಇಲ್ಲಿ ನಡೆಯಿತು.

ಕಾಫಿ ಪರಿಮಳವಷ್ಟೇ ಅಲ್ಲ ರುಚಿ ಸವಿಯಲೂ ಸಂತೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆರೋಗ್ಯಪ್ರಿಯರಿಗಾಗಿ ಯೋಗ ಕುರಿತು ಮಾಹಿತಿ ನೀಡಲಾಯಿತು. ಸಂಗೀತ ಕಾರ್ಯಕ್ರಮಗಳು, ಚಿತ್ರಕಲಾವಿದರಿಗೂ ಕಾಫಿಸಂತೆಯಲ್ಲಿ ವೇದಿಕೆ ಕಲ್ಪಿಸಲಾಗಿತ್ತು. ಕಾಫಿ ಪುಡಿ ಬಳಸಿ ಮಾಡಬಹುದಾದ ಚಿತ್ರಕಲೆ ಸಂತೆಯ ವಿಶೇಷವಾಗಿತ್ತು. ರಾಸಾಯನಿಕ ಮುಕ್ತವಾಗಿರುವ ನೈಸರ್ಗಿಕ ತಾಜಾ ಕೇಕ್‌ಗಳು ಕೇಕ್‌ಪ್ರಿಯರ ಮನಗೆದ್ದವು.

ಈ ಬಾರಿಯ ‘ಕಾಫಿ ಸಂತೆ’ ಹಿಂದಿಗಿಂತಲೂ ಯಶಸ್ವಿಯಾಗಿ ಆಯೋಜಿತವಾಗಿದೆ. ವಿವಿಧ ಬ್ರ್ಯಾಂಡ್‌ ಕಾಫಿಪುಡಿಗಳು, ಅವುಗಳನ್ನು ತಯಾ
ರಿಸುವ ವಿಧಾನಗಳಷ್ಟೇ ಅಲ್ಲ ಮಹಿಳೆಯುರು ಮತ್ತು ಯುವಜನರಿಗೆ ಇಷ್ಟವಾಗುವಂಥ ವಿಷಯಗಳೂ ಇಲ್ಲಿದ್ದವು ಎಂದು ವುಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಡಿ.ಎಂ.ಪೂರ್ಣೇಶ್ ತಿಳಿಸಿದರು.

‘ಕಾಫಿ ಸಂತೆ’ ಹಿರಿಯರಷ್ಟೇ ಅಲ್ಲ ಇಂದಿನ ಯುವಜನಾಂಗವನ್ನೂ ಬೆಸೆಯುವ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ಈ ಮೂಲಕ ಹಿರಿ–ಕಿರಿಯ ಕಾಫಿ ಪ್ರಿಯರೆಲ್ಲಾ ಒಟ್ಟಾಗಿ ಸೇರುವ ಅವಕಾಶವನ್ನೂ ಈ ಸಂತೆ ಕಲ್ಪಿಸಿದ್ದು ವಿಶೇಷ ಎಂದು ತಮ್ಮ ಅನುಭವ ಹಂಚಿಕೊಂಡರು ‘ಚಿಕ್‌ಕಾಫಿ’ಯ ಸಂಸ್ಥಾಪಕಿ ಸವ್ಯಶ್ರೀಗೌಡ.

ಕಾಫಿತೋಟಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸಬಲೀಕರಣ ಹಾಗೂ ಅವರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಮಹಿಳಾ ಕಾಫಿ ಅಲೆಯನ್ಸ್‌–ಇಂಡಿಯಾ’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT