7

ಉಳಿತಾಯದ ಹಾದಿ

Published:
Updated:
ಉಳಿತಾಯದ ಹಾದಿ

* ಪ್ರತಿ ತಿಂಗಳು ಆಗುತ್ತಿರುವ ಖರ್ಚು-ವೆಚ್ಚಗಳ ಪಟ್ಟಿಯ ಮೇಲೆ ಕಣ್ಣಾಡಿಸಿ. ಅದರಲ್ಲಿ ಯಾವುದು ಅತ್ಯಗತ್ಯ, ಯಾವುದು ಅನಗತ್ಯ ಎಂಬುದನ್ನು ಪಟ್ಟಿ ಮಾಡಿ.

* ಮನೆಗೆ ಸಾಮಾನುಗಳನ್ನು ಕೊಳ್ಳುವಾಗ ಅಂಗಡಿಯವರು ಕೇಳಿದಷ್ಟು ಹಣ ನೀಡುವ ಬದಲು ಚೌಕಾಸಿ ಮಾಡಿ. ಸಗಟು ದರದಲ್ಲಿ ಖರೀದಿಸಲು ಯತ್ನಿಸಿ.

* ವಿದ್ಯುತ್‌ ಉಪಕರಣಗಳನ್ನು ಅನಗತ್ಯವಾಗಿ ಬಳಸಬೇಡಿ. ಮೈಕ್ರೊವೇವ್‌, ಡಿವಿಡಿ ಪ್ಲೇಯರ್‌, ಏರ್‌ಕಂಡೀಶನರ್‌, ಫ್ಯಾನ್‌ ಅನಗತ್ಯವಾಗಿ ಬಳಸದಿರಿ. ವಿದ್ಯುತ್‌ ಬಿಲ್‌ನಲ್ಲಿ ಒಂದು ರೂಪಾಯಿ ಉಳಿಸಿದರೆ, ಎರಡು ರೂಪಾಯಿ ಸಂಪಾದಿಸಿದಂತೆ.

* ಮನೆಯಲ್ಲಿ ಹುಂಡಿ ಇರಿಸಿಕೊಳ್ಳಿ. ಚಿಲ್ಲರೆಕಾಸನ್ನು ಇದಕ್ಕೆ ಹಾಕಿ. ಸ್ವಲ್ಪ ತಿಂಗಳಿನಲ್ಲಿಯೇ ಸಾವಿರಾರು ರೂಪಾಯಿ ಒಟ್ಟಾಗಿರುತ್ತದೆ.

* ಶಾಪಿಂಗ್‌ ಹೋದಾಗ ದುಡ್ಡಿದೆ ಎಂದು ಕಂಡ ಕಂಡ ವಸ್ತುಗಳನ್ನೆಲ್ಲ ಖರೀದಿಸಬೇಡಿ. ಅಗತ್ಯವಿದ್ದರೆ ಮಾತ್ರ ಕೊಂಡುಕೊಳ್ಳಿ.

* ಕ್ರೆಡಿಟ್‌ ಕಾರ್ಡ್‌ ಕೈಲ್ಲಿದ್ದರೆ ಕಂಡಿದ್ದೆಲ್ಲ ಕೊಳ್ಳುವ ಮನಸ್ಸಾಗುತ್ತದೆ. ಕ್ರೆಡಿಟ್ ಕಾರ್ಡ್‌ ಮನೆಯಲ್ಲಿಯೇ ಇಟ್ಟು ಶಾಪಿಂಗ್‌ಗೆ ಹೋಗುವುದನ್ನು ರೂಢಿಸಿಕೊಳ್ಳಿ.

* ಹೋಟೆಲ್‌ನಲ್ಲಿ ಹೆಚ್ಚು ತಿನ್ನಬೇಡಿ. ಮನೆಯಲ್ಲಿಯೇ ಅಡುಗೆ ಮಾಡಿ. ಇದರಿಂದ ಹೋಟೆಲ್‌ಗೆ ಹಾಕುವ ಹಣವೂ ಉಳಿಯುತ್ತದೆ. ಆರೋಗ್ಯ ಕೆಟ್ಟಾಗ ಆಸ್ಪತ್ರೆಗಳಿಗೆ ಮಾಡುವ ಖರ್ಚು ತಪ್ಪುತ್ತದೆ.

* ಸಂಬಳದ ಹಣ ಕೈಸೇರುವ ಮುನ್ನವೇ ಸ್ವಲ್ಪ ಮೊತ್ತ ಉಳಿತಾಯಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿ. ಸಂಬಳ ಕಡಿತದ ಉಳಿತಾಯ ಯೋಜನೆಗಳು ಒಳ್ಳೆಯ ಆಯ್ಕೆ.

* ಮಕ್ಕಳಿಗಾಗಿಯೇ ಹುಂಡಿ ಕೊಡಿಸಿ. ಯಾರೇ ದುಡ್ಡು ಕೊಟ್ಟರೂ, ಆ ಹುಂಡಿಯಲ್ಲಿ ಹಣ ಹಾಕುವಂತೆ ಹೇಳಿ. ಈ ಉಳಿತಾಯದ ಹಣವನ್ನು ಅವರ ಖರ್ಚಿಗೆ ಬಳಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry