ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕ್ಕೆ ಒಲಿದ ಕಿರೀಟ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

1966ರಿಂದ 2017ರವರೆಗೆ ನಡೆದಿರುವ ವಿಶ್ವಸೌಂದರ್ಯ ಸ್ಪರ್ಧೆಗಳಲ್ಲಿ ಗೆಲುವಿನ ನಗೆ ಬೀರಿರುವ ಭಾರತದ ಸುಂದರಿಯರ ಉತ್ತರ ಏನಿತ್ತು ಗೊತ್ತೆ?

ರೀಟಾ ಫರಿಯಾ (1966)
‘ನೀವೇಕೆ ವೈದ್ಯೆ ಆಗಬೇಕು ಎಂದುಕೊಂಡಿದ್ದೀರಿ’ ಏಂಬ ಪ್ರಶ್ನೆಗೆ ರೀಟಾ ಅವರು ‘ಭಾರತಕ್ಕೆ ಪ್ರಸೂತಿ ತಜ್ಞರು (ಒಬೆಸ್ಟೆಟ್ರೀಷಿಯನ್‌) ಮತ್ತು ಸ್ತ್ರೀರೋಗತಜ್ಞರ (ಗೈನಾಕಾಲಜಿಸ್ಟ್‌) ಅಗತ್ಯ ಇದೆ’ ಎಂದರು. ಇದಕ್ಕೆ ಜ್ಯೂರಿ ತಮಾಷೆಯಾಗಿ ‘ಭಾರತದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳು ಇದ್ದಾರಲ್ಲ’ ಎಂದರು. ತಕ್ಷಣವೇ ರೀಟಾ, ‘ನಾವು ಜನಸಂಖ್ಯೆ ಮಟ್ಟವನ್ನು ಕಡಿಮೆ ಮಾಡುವ ಅಗತ್ಯವಿದೆ’ ಎಂದು ಪ್ರತಿಕ್ರಿಯಿಸಿದರು. ಈ ಉತ್ತರಕ್ಕೆ ಚಪ್ಪಾಳೆಗಳ ಸುರಿಮಳೆಯ ಗೌರವ ದಕ್ಕಿತು.

*


ಐಶ್ವರ್ಯಾ ರೈ (1994)
‘ವಿಶ್ವಸುಂದರಿ ಹೊಂದಿರಲೇಬೇಕಾದ ಗುಣ ಯಾವುದು’ ಎಂಬ ಪ್ರಶ್ನೆ ಎದುರಾದಾಗ, ‘ಪ್ರಚಲಿತ ವಿದ್ಯಮಾನಗಳ ಬಗೆಗೆ ತಿಳಿದುಕೊಂಡಿರಬೇಕು. ದುರ್ಬಲ ಸಮುದಾಯದ ಬಗ್ಗೆ ಸಹಾನುಭೂತಿ ಹೊಂದಿರಬೇಕು. ಬಣ್ಣ, ಜನಾಂಗ ವರ್ಗಭೇದವೆಂಬ ಮನುಷ್ಯ ನಿರ್ವಿುತ ಅಡೆತಡೆಗಳನ್ನು ಮೀರಿ ಮಾನವೀಯತೆಯನ್ನು ಪ್ರಧಾನವಾಗಿಸಿಕೊಂಡು ಮುನ್ನಡೆಯುವ ಜಾಣ್ಮೆ ಹೊಂದಿರಬೇಕು’ ಎಂದು ಉತ್ತರಿಸಿದ್ದರು.

*

ಡಯಾನಾ ಹೇಡನ್‌ (1997)
‘ನನ್ನ ಸ್ಫೂರ್ತಿ ಜನಪ್ರಿಯ ಕವಿ ವಿಲಿಯಂ ಬಟ್ಲರ್‌. ಅವರ ‘ಡ್ರಿಮ್ಸ್‌ ಬಿಗಿನ್ಸ್‌ ರೆಸ್ಪಾನ್‌ಸಿಬಲಿಟಿ’ ನನ್ನನ್ನು ಆಕರ್ಷಿಸಿತು. ಕನಸಿನ ಜೊತೆ ಜವಾಬ್ದಾರಿ ಪ್ರಾರಂಭವಾಗುತ್ತದೆ. ಈ ಶೀರ್ಷಿಕೆಯೇ ಕನಸಿನ ಜೊತೆಗೆ ಜವಾಬ್ದಾರಿಯನ್ನು ಕಲಿಸುತ್ತದೆ. ನಾನು ಬೇರೆಯವರ ಕನಸಿನ ಸಾಕಾರಕ್ಕೆ ನೆರವಾಗಬೇಕು’ ಇದು ಡಯಾನಾ ಹೆಡನ್‌ ತಮ್ಮ ಕನಸಿನ  ಬಗ್ಗೆ ಹೇಳಿದ ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

*


ಯುಕ್ತಾ ಮುಖಿ(1999)

*

ಪ್ರಿಯಾಂಕಾ ಚೋಪ್ರ (2000)
‘ನೀವು ತುಂಬಾ ಗೌರವಿಸುವ ಮಹಿಳೆ ಯಾರು’ ಎಂಬ ಪ್ರಶ್ನೆಗೆ ಪ್ರಿಯಾಂಕಾ ನೀಡಿದ ಉತ್ತರ, ‘ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಸಹಾನುಭೂತಿ ಮತ್ತು ವಿವೇಚನೆಯ ಹದಪಾಕದಂತಿರುವ ಮದರ್‌ ಥೆರೇಸಾ ನನಗೆ ಇಷ್ಟ’.

*


ಮಾನುಷಿ ಛಿಲ್ಲರ್‌(2017)
‘ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆಗೆ ಅರ್ಹವಾದ ಹುದ್ದೆ ಯಾವುದು?’ ಇದು ಇತ್ತೀಚೆಗಷ್ಟೇ ವಿಶ್ವಸುಂದರಿ ಪಟ್ಟ ಗೆದ್ದ ಮಾನುಷಿಗೆ ಕೇಳಿದ ಪ್ರಶ್ನೆ. ‘ತಾಯಿಯೇ ಅತಿ ಹೆಚ್ಚು ಸಂಭಾವನೆಗೆ ಅರ್ಹಳು. ನಾನು ಸಂಭಾವನೆ ಎಂದಾಕ್ಷಣ ದುಡ್ಡಿನ ವಿಷಯ ಮಾತ್ರವೇ ಹೇಳುತ್ತಿಲ್ಲ. ಪ್ರೀತಿ, ಗೌರವದ ಕುರಿತು ಮಾತನಾಡುತ್ತಿದ್ದೇನೆ. ತಾಯಿಯೇ ನನ್ನ ಜೀವನದ ಬಹುದೊಡ್ಡ ಸ್ಫೂರ್ತಿ. ಎಲ್ಲ ತಾಯಂದಿರು ತಮ್ಮ ಮಕ್ಕಳಿಗಾಗಿ ಹಾಗೂ ಸಂಸಾರಕ್ಕಾಗಿ ಎಷ್ಟೊಂದು ತ್ಯಾಗ ಮಾಡುತ್ತಾರೆ. ಹೀಗಾಗಿ ನನ್ನ ಪ್ರಕಾರ ತಾಯ್ತನಕ್ಕೆ ಹೆಚ್ಚಿನ ಗೌರವ, ಸಂಬಳ ಸಿಗಬೇಕು’ ಎಂದರು ಮಾನುಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT