ಮಂಗಳವಾರ, ಮಾರ್ಚ್ 2, 2021
26 °C

ರಾಷ್ಟ್ರೀಯ ಗ್ರಾಮೀಣ ಯುವ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಗ್ರಾಮೀಣ ಯುವ ಸಮಾವೇಶ

ಬೆಂಗಳೂರು: ‘ಸರಗಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರು ಈಗ ಮೂರು ಜಿಲ್ಲೆಗಳಲ್ಲಿ ವೇದವತಿ ನದಿಯ ಪುನಶ್ಚೇತನ ಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ’ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಗ್ರಾಮೀಣ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಆರ್ಟ್ ಆಫ್ ಲಿವಿಂಗ್‌ನ ಯುವ ನಾಯಕತ್ವ ತರಬೇತಿ ಅಡಿಯಲ್ಲಿ (ವೈಎಲ್‌ಟಿಪಿ) 2.22 ಲಕ್ಷ ಮಂದಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕೈಜೋಡಿಸಿದ್ದಾರೆ. 33 ನದಿಗಳ ಪುನಶ್ಚೇತನ ಕಾರ್ಯದಲ್ಲಿ ಸಹಾಯ ಮಾಡಿದ್ದಾರೆ. 22 ಲಕ್ಷ ರೈತರಿಗೆ ಸಹಜ ಕೃಷಿಯಲ್ಲಿ ತರಬೇತಿ ನೀಡಿದ್ದಾರೆ. ಅನೇಕ ಮಾದರಿ ಹಳ್ಳಿಗಳನ್ನು ರೂಪಿಸಲು ಮುಂದಾಗಿದ್ದಾರೆ. ಸಾವಿರಾರು ಜನರನ್ನು ವ್ಯಸನ ಮುಕ್ತರನ್ನಾಗಿ ಮಾಡಿದ್ದಾರೆ’ ಎಂದರು.

‘ಉತ್ಸಾಹ, ಸವಾಲುಗಳನ್ನು ಎದುರಿಸಲು ಸಿದ್ಧತೆ ಮತ್ತು ಜೀವನದಲ್ಲೊಂದು ಗುರಿ ಹೊಂದುವುದು ಯುವಕರ ಲಕ್ಷಣ. ಈ ಮೂರೂ ಇದ್ದರೆ ಯಶಸ್ಸು ಸಾಧಿಸಬಹುದು. ಭಾರತವು ಸ್ವಉದ್ಯೋಗ ಮತ್ತು ಕುಶಲ ತರಬೇತಿಯನ್ನು ಅಪಾರ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಚತ್ತೀಸಗಡದ ರೋಹಿತ್ ವರ್ಮ ಮಾತನಾಡಿ,‘ಬಸ್ತಾರಿನ ನಕ್ಸಲ್ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಲು ಮುಂದಾಗಿದ್ದೇನೆ. ಇದಕ್ಕಾಗಿ 250 ಮಕ್ಕಳ ಶಾಲೆಯನ್ನು ಈಗಾಗಲೇ ಆರಂಭಿಸಿದ್ದೇನೆ’ ಎಂದರು.

ಸಮಾವೇಶದಲ್ಲಿ 26 ರಾಜ್ಯಗಳ 2,600 ಮಂದಿ ಪಾಲ್ಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.