ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಪರ್ವ ಡಿ.10ಕ್ಕೆ

Last Updated 5 ಡಿಸೆಂಬರ್ 2017, 5:42 IST
ಅಕ್ಷರ ಗಾತ್ರ

ಮಂಡ್ಯ: ‘ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಡಿ.10ರಂದು ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಆವರಣದಲ್ಲಿ ಉದ್ಯೋಗ ಪರ್ವ ಹೆಸರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ವೇದಿಕೆ ಅಧ್ಯಕ್ಷ ಡಾ.ಬಿ.ಎಸ್‌.ಶಿವಣ್ಣ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಉದ್ಯೋಗ ಮೇಳವನ್ನು ಹಿರಿಯ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರು ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಡಾ.ಮಹಾದೇವಪ್ಪ, ಖ್ಯಾತ ಉದ್ಯಮಿಗಳಾದ ಸಿ.ನಾಗರಾಜ್‌, ಮಾರುತಿ ಸ್ಯಾನ್‌, ವಿಶಾಲ್‌ ನಾಯರ್‌ ಮುಂತಾದವರು ಮೇಳದಲ್ಲಿ ಪಾಲ್ಗೊಳ್ಳು ವರು. ಮೇಳದಲ್ಲಿ 200 ಕಂಪೆನಿಗಳು ಭಾಗವಹಿಸುತ್ತಿದ್ದು ಉದ್ಯೋಗಾ ಕಾಂಕ್ಷಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಣೆ ಮಾಡಲಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಅಭ್ಯರ್ಥಿಗಳೂ ಉಚಿತವಾಗಿ ಮೇಳದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

‘ಈ ಉದ್ಯೋಗ ಪರ್ವ ಕಾರ್ಯಕ್ರಮ ಮಳವಳ್ಳಿಯಿಂದ ಆರಂಭವಾಗುತ್ತಿದ್ದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು. ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ತಾಲ್ಲೂಕು, ಹೋಬಳಿ ಕೇಂದ್ರಗಳಿಗೂ ಮೇಳವನ್ನು ವಿಸ್ತರಣೆ ಮಾಡಲಾಗುವುದು. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಕಂಪೆನಿಗಳಲ್ಲಿ ಇತ್ತೀಚೆಗೆ ಕನ್ನಡ ಭಾಷೆಯ ಯುವಜನರು ಸೇರುವುದು ಕಷ್ಟವಾಗುತ್ತಿದೆ. ಈ ವಿಷಯ ಮನಗಂಡು ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಕಂಪೆನಿಗಳಲ್ಲಿ ಕೆಲಸ ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಂಪೆನಿಗಳೇ ಅಭ್ಯರ್ಥಿಗಳು ಇರುವ ಸ್ಥಳಕ್ಕೆ ಬರುತ್ತಿದ್ದು ಇದರಿಂದ ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲ’ ಎಂದರು.

‘ಈ ಉದ್ಯೋಗ ಮೇಳ ಕೇವಲ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾತ್ರವಲ್ಲ, ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ರಾದವರು, ಐದನೇ ತರಗತಿ ಓದಿದವರೂ ಪಾಲ್ಗೊಳ್ಳ ಬಹುದು. ಕುಶಲಕರ್ಮಿಗಳು, ಚಾಲಕರು, ಕ್ಷೌರದಂಗಡಿಗಳಲ್ಲಿ ಕೆಲಸ ಮಾಡುವವರು, ಹೋಟೆಲ್‌, ಆಸ್ಪತ್ರೆಗಳ ಸ್ವಚ್ಛತಾ ಕಾರ್ಮಿಕರ ನೇಮಕಾತಿಗೂ ಹಲವು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಕಸ ಗುಡಿಸುವವರು, ಮರಗೆಲಸದವರು ಮುಂತಾದ ಸಣ್ಣ ಪುಟ್ಟ ಉದ್ಯೋಗಿ ಗಳನ್ನೂ ಕಂಪೆನಿಗಳು ನೇಮಕ ಮಾಡಿ ಕೊಳ್ಳುತ್ತಿವೆ. ಗ್ರಾಮೀಣ ಭಾಗದಲ್ಲಿರುವ ಯುವಕರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕೌಶಲ ತರಬೇತಿ: ‘ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪೆನಿಗಳು ಯುವಜನರಿಗೆ ಕೌಶಲ ತರಬೇತಿ ನೀಡಲಿವೆ. ವೇದಿಕೆ ಈ ಕುರಿತು ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಅಭ್ಯರ್ಥಿಗಳನ್ನು ಉಚಿತವಾಗಿ ವಿದೇಶಗಳಿಗೆ ಕಳುಹಿಸಿ ಅವರಿಗೆ ಕೌಶಲ ತರಬೇತಿ ತರಬೇತಿ ನೀಡಲಾಗುವುದು. ಇದರಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಶಾಂತಿ ಕಾಲೇಜು ಆವರಣದಲ್ಲಿ 200 ಮಳಿಗೆ ಸ್ಥಾಪಿಸಲಾಗಿದೆ. ಒಬ್ಬ ಅಭ್ಯರ್ಥಿ ವಿವಿಧ ಮಳಿಗೆಗಳಲ್ಲಿ ಸಂದರ್ಶನ ನೀಡಬಹುದು’ ಎಂದು ಹೇಳಿದರು.

ಗಾರ್ಮೆಂಟ್ಸ್‌ ಸ್ಥಾಪನೆ: ಮಳವಳ್ಳಿ ಸಮೀಪ 20 ಎಕರೆ ಜಮೀನಿನಲ್ಲಿ ಗಾರ್ಮೆಂಟ್‌ ಕಾರ್ಖಾನೆ ಸ್ಥಾಪಿ ಸಲು ಉದ್ದೇಶಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಮಹಿಳೆ ಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗು ವುದು. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಿಬಿಎಸ್‌ಇ ಶಾಲೆ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉದ್ಯೋಗ ಮೇಳದ ಪ್ರಚಾರ ಪತ್ರ ಬಿಡುಗಡೆ ಮಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪ್ರಾಧ್ಯಾಪಕ ಡಾ.ಅಶ್ವಿನ್‌ ಚನ್ನೇಗೌಡ ಹಾಜರಿದ್ದರು.

* * 

ರಾಜಕೀಯ ಕಾರಣಕ್ಕೆ ಈ ಮೇಳ ಆಯೋಜನೆ ಮಾಡುತ್ತಿಲ್ಲ. ಸಮ ಸಮಾಜ ನಿರ್ಮಿಸಲು ವೇದಿಕೆ ಕೆಲಸ ಮಾಡುತ್ತಿದೆ. ಇದೂ ಅದರ ಭಾಗ.
ಡಾ.ಬಿ.ಎಸ್‌.ಶಿವಣ್ಣ
ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT