7

ಹದಗೆಟ್ಟ ರಸ್ತೆ; ಮಕ್ಕಳು ಹೈರಾಣು

Published:
Updated:
ಹದಗೆಟ್ಟ ರಸ್ತೆ; ಮಕ್ಕಳು ಹೈರಾಣು

ಆಲಮೇಲ: ಸಮೀಪದ ಕಡಣಿ ಗ್ರಾಮದಲ್ಲಿ ವಾರ್ಡ್ ನಂ.1ರಲ್ಲಿನ ಅಂಗನವಾಡಿಗೆ ಹೋಗುವ ರಸ್ತೆ ಸಂಪೂರ್ಣ ನೀರು ತುಂಬಿಕೊಂಡು ಕೆಸರು ಗದ್ದೆಯಾಗಿರುವುದರಿಂದ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಅಲ್ಲದೆ ಪ್ರಾಥಮಿಕ ಆರೋಗ್ಯದ ಉಪಕೇಂದ್ರವೂ ಸಹ ಇಲ್ಲಿಯೇ ಇರುವದರಿಂದ ಆಸ್ಪತ್ರೆಗೆ ಹೋಗಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಆಸ್ಪತ್ರೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಹತ್ತಿರದಲ್ಲಿಯೇ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದು ನೀರು ಪೋಲಾಗಿ ರಸ್ತೆಯಲ್ಲಿ ತುಂಬಿಕೊಂಡು ಕೆಸರು ಗದ್ದೆಯಾಗಿ ರಸ್ತೆ ಮಾರ್ಪಾಡುತ್ತದೆ.

ಈ ಕುರಿತು ಹಲವಾರು ಸಲ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ರಸ್ತೆಯನ್ನು ಸುಧಾರಿಸಿ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಒತ್ತಾಯಿಸಿ ಬಸವರಾಜ ಪಡಶೆಟ್ಟಿ, ಮಲ್ಲಪ್ಪ ತಳವಾರ, ಮಾಂತಯ್ಯ ನಂದಿಕೋಲ, ನಾಗಣ್ಣ ವಡಗೇರಿ, ಭೋಗಪ್ಪ ತಾಂಬೆ, ಭೀಮರಾಯ ವಡಗೇರಿ ಸುಭಾಸ ಮಣೂರ ಮೊದಲಾದವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry