7

ಕೀಳುಮಟ್ಟದ ಟೀಕೆ ನಿಲ್ಲಲಿ: ನಿರಾಣಿ

Published:
Updated:

ಮುಧೋಳ: ‘ಕಾಂಗ್ರೆಸ್ ಶಾಸ ಕರು ಸಚಿವರು ಎಲ್ಲೆ ಮೀರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್. ಈಶ್ವರಪ್ಪ, ಬಿಜೆಪಿ ಹಿರಿಯ ನಾಯಕರಾದ ಗೋವಿಂದ ಕಾರಜೋಳ ಹಾಗೂ ಸಂಸದ ಪ್ರತಾಪ ಸಿಂಹ ಅವರನ್ನು ಕೀಳುಮಟ್ಟದ ಭಾಷೆಯಲ್ಲಿ ಟೀಕಿಸುತ್ತಿದ್ದಾರೆ. ಇದು ಖಂಡನೀಯ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

‘ಭಾಷೆ ಸಂವಹನದ ಮಾಧ್ಯಮ. ಅದು ಜನರ ನಡುವೆ ತಿಳಿವಳಿಕೆ ಮತ್ತು ಸಂಪರ್ಕದ ಸಾಧನ. ನುಡಿಗೆ ಅನನ್ಯ ಶಕ್ತಿಯಿದೆ. ಮಾತೆಂಬುದು ಜ್ಯೋತಿರ್ಲಿಂಗ ಎಂದು ಅಲ್ಲಮಪ್ರಭು ಹೇಳಿದ್ದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ರಾಜಕಾರಣಿಗಳಿಂಗಿಂತ ಹೆಚ್ಚಾಗಿ ಸಾಹಿತಿಗಳು ವೇದಿಕೆ ಮೇಲೆ ಅಸಂವಿಧಾನಿಕ ಭಾಷೆ ಬಳಸಿ ಮಾತನಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಭೂಷಣವಲ್ಲ. ಮೈಸೂರಿನಲ್ಲಿ ಈಚೆಗೆ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳನ್ನು ಸಾಹಿತಿಗಳು ಹಾಗೂ ಸಾಹಿತಿಗಳನ್ನು ರಾಜಕಾರಣಿಗಳು ಕೆಳಮಟ್ಟದ ಭಾಷೆ ಬಳಸಿ ಬಯ್ದಾಡಿಕೊಂಡಿದ್ದು ಕನ್ನಡ ತಾಯಿ ಭುವನೇಶ್ವರಿಗೆ ಮಾಡಿದ ಅಪಮಾನ. ದೆಹಲಿಯಲ್ಲಿ ವಾಯು ಮಾಲಿನ್ಯ ಹರಡಿದರೆ ಕರ್ನಾಟಕದಲ್ಲಿ ನುಡಿ ಮಾಲಿನ್ಯ ಹರಡುತ್ತದೆ. ಇದು ನೋವಿನ ಸಂಗತಿ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry