ಸೋಮವಾರ, ಮಾರ್ಚ್ 1, 2021
23 °C
ಹೆಣ್ಣು ಮಗು ಎಂಬ ಕಾರಣ

ಹೆತ್ತ ಮಗುವನ್ನೇ ಉಸಿರುಗಟ್ಟಿಸಿಕೊಂದು ವಾಷಿಂಗ್‌ ಮೆಷಿನ್‌ಗೆ ಹಾಕಿದ ತಾಯಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೆತ್ತ ಮಗುವನ್ನೇ ಉಸಿರುಗಟ್ಟಿಸಿಕೊಂದು ವಾಷಿಂಗ್‌ ಮೆಷಿನ್‌ಗೆ ಹಾಕಿದ ತಾಯಿ

ಗಜಿಯಾಬಾದ್: ಮೂರು ತಿಂಗಳ ಹಸುಳೆಯನ್ನು ಹೆತ್ತ ತಾಯಿಯೇ ಉಸಿರುಗಟ್ಟಿ ಕೊಂದು ವಾಷಿಂಗ್ ಮೆಷಿನ್‌ಗೆ ಹಾಕಿದ ಮನಕಲಕುವ ಘಟನೆ ಪಾಟ್ಲಾ ನಗರದಲ್ಲಿ ನಡೆದಿದೆ.

ಈ ಅಮಾನವೀಯ ಕೃತ್ಯ ಎಸಗಿದ ತಾಯಿಯೇ ಆರತಿ (22). ಇವರನ್ನು ಬಂಧಿಸಿದ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.

ಬಂಧಿತ ಆರತಿ ಮೂರು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗು ಬೇಕು ಎಂಬ ಕಾರಣಕ್ಕೆ ಖಿನ್ನತೆ ಒಳಗಾಗಿದ್ದ ಇವರು ಕೋಪಗೊಂಡು ಭಾನುವಾರ ದಿಂಬಿನಿಂದ ಉಸಿರುಗಟ್ಟಿ ಸಾಯಿಸಿದ್ದಾರೆ. ಕೊನೆಗೆ ಮಗುವನ್ನು ವಾಷಿಂಗ್‌ ಮೆಷಿನ್‌ನಲ್ಲಿ ಹಾಕಿದ್ದಾರೆ ಎಂದು ಎಸ್‌ಪಿ ಆಕಾಶ್ ಥೋಮರ್ ವಿವರಿಸಿದ್ದಾರೆ.

ಆರತಿ ಅವರು ಮೊದಲು ಮಗು ಕಾಣೆಯಾಗಿದೆ ಎಂದು ಹೇಳಿದ್ದರು. ಬಳಿಕ ಈ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ ತಾವೇ ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡರು  ಎಂದು ಪೊಲೀಸರು ಹೇಳಿದ್ದಾರೆ.

ಆರತಿ ಮೇಲೆ ಗಂಡು ಮಗು ಬೇಕು ಎಂದು ಯಾವುದೇ ಒತ್ತಡ ಹಾಕಿರಲಿಲ್ಲ ಹಾಗೂ ಬೆದರಿಕೆಯೊಡ್ಡಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ. ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ ಎಂದು ಥೋಮರ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.