6

ಜಂಬದಹಳ್ಳಿ: 15 ಸಾವಿರ ಹೆಕ್ಟೇರ್‌ಗೆ ನೀರು

Published:
Updated:

ತರೀಕೆರೆ: ₹60 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಜಂಬದಹಳ್ಳ ಪಥ ಪರಿವರ್ತನೆ ಯೋಜನೆ ಕಾಮಗಾರಿಯಿಂದಾಗಿ ಕಸಬಾ ವ್ಯಾಪ್ತಿಯ 15 ಸಾವಿರ ಹೆಕ್ಟೇರ್ ಭೂಮಿಗೆ ನೀರು ಲಭ್ಯವಾಗಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಜಂಬದಹಳ್ಳಿ ಪಥಪರಿವರ್ತನೆ ಯೋಜನೆಯ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿ ಮಾತನಾಡಿದ ಅವರು ‘ಅಜ್ಜಂಪುರ, ಅಮೃತಾಪುರ, ಶಿವನಿ ಹೋಬಳಿಗಳಿಗೆ ತುಂತುರು ನೀರಾವರಿ ಕಾಮಗಾರಿಗಾಗಿ ಸರ್ಕಾರದಿಂದ ಶೀಘ್ರದಲ್ಲಿ ಅನುಮತಿ ದೊರೆಯಲಿದ್ದು, ಮುಖ್ಯಮಂತ್ರಿಗಳು ಚಾಲನೆ ನೀಡಿಲಿದ್ದಾರೆ ಎಂದರು.

ಪಟ್ಟಣ, ಅಜ್ಜಂಪುರ ಹಾಗೂ ಹೊಸದುರ್ಗ ತಾಲ್ಲೂಕಿಗೆ ಭದ್ರಾ ನದಿಯಿಂದ ಪೈಪ್‍ಲೈನ್ ಮೂಲಕ ನೀರು ಹರಿಸುವ ₹410 ಕೋಟಿ ಯೋಜನೆಗೆ ಅನುಮತಿ ಕೋರಲಾಗಿದೆ ಎಂದು ತಿಳಿಸಿದ ಅವರು ಕ್ಷೇತ್ರದಲ್ಲಿ ಇನ್ನು ಮುಂದೆ ಅಭಿವೃದ್ಧಿ ರಾಜಕಾರಣ ನಡೆಯುತ್ತದೆಯೆ ಹೊರತು ಜಾತಿ ರಾಜಕಾರಣವಲ್ಲ ಎಂದರು.

ಕೃಷಿಕ ಆರ್.ರಾಮಚಂದ್ರಪ್ಪ ಮಾತನಾಡಿ, ‘ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಶಾಸಕರು ಚಾಲನೆ ನೀಡಿದ್ದರಿಂದ ರೈತರ ಬದುಕು ಹಸನಾಗಲಿದೆ. ಜಂಬದಹಳ್ಳ ಜಲಾಶಯದ ಕೋಡಿಯನ್ನು ಇನ್ನಷ್ಟು ಎತ್ತರಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿಜೇಂದ್ರ ನಾಯ್ಕ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಟಿ.ಜಿ.ಅಶೋಕ್ ಕುಮಾರ್, ಸಿದ್ದರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಮ್ಮ, ಉಪಾಧ್ಯಕ್ಷೆ ಧನಲಕ್ಷ್ಮಿ, ವೀರಮಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry