3

ಗೋಹತ್ಯೆ ನಿಷೇಧ: ಪತ್ರ ಚಳವಳಿ

Published:
Updated:

ಮುಂಡರಗಿ: ‘ಗೋಹತ್ಯೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಹೇಳಿದರು. ಪಟ್ಟಣದ ಬೃಂದಾವನ ವೃತ್ತದಲ್ಲಿ ಸೋಮವಾರ ಗೋಹತ್ಯೆ ನಿಷೇಧ ಪತ್ರ ಚಳವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿ ದೇಶಿ ಗೋವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ದೇಸಿ ತಳಿಗಳನ್ನು ಸಂರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಕಾಯಿದೆ ರೂಪಿಸಬೇಕು. ಗೋ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಯುವ ಮುಖಂಡ ಮಂಜುನಾಥ ಇಟಗಿ, ನಾರಾಯಣಪ್ಪ ಇಲ್ಲೂರ, ಅಂದಪ್ಪ ಬೆಲ್ಲದ, ನಾಗಪ್ಪ ಸೇಡದ, ಕೆ.ವಿ.ಹಂಚಿನಾಳ, ಕೆ.ಎ. ಹಿರೇಮಠ, ಬಿ.ವಿ.ಮುದ್ದಿ, ಆರ್.ಬಿ.ತಿಮ್ಮಾಪೂರ, ಬಸವರಾಜ ರಾಮೇನಹಳ್ಳಿ, ಆನಂದಗೌಡ ಪಾಟೀಲ, ಸಂತೋಷ ಸುಣಗಾರ, ಪಿ.ಜಿ.ಹಿರೇಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry