ಸೋಮವಾರ, ಮಾರ್ಚ್ 1, 2021
28 °C

ಮತ್ತೆ ಧಕ್‌ ಧಕ್‌ ಧಮಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಧಕ್‌ ಧಕ್‌ ಧಮಾಲ್‌

ಧಕ್‌ ಧಕ್‌ ಸುಂದರಿ ಮಾಧುರಿ ದೀಕ್ಷಿತ್‌ ಮತ್ತು ನಟ ಅನಿಲ್‌ ಕಪೂರ್‌ ‘ಧಮಾಲ್‌’ ಚಿತ್ರದ ಮೂಲಕ ಮತ್ತೆ ಜೊತೆಯಾಗುತ್ತಿದ್ದಾರೆ. ಈ ಜೋಡಿ 2000ದಲ್ಲಿ ತೆರೆ ಕಂಡ ‘ಪುಕಾರ್‌’ ಚಿತ್ರದಲ್ಲಿ ಇವರು ಒಟ್ಟಿಗೆ ನಟಿಸಿದ್ದೇ ಕೊನೆಯಾಗಿತ್ತು.

ಈ ಚಿತ್ರಕ್ಕೂ ಮೊದಲು, ಏಕ್‌ ದೊ ತೀನ್‌ ಖ್ಯಾತಿಯ ‘ತೇಜಾಬ್‌’, ಧಕ್‌ ಧಕ್‌ ಕರನೆ ಲಗಾ ಹಾಡಿನ ‘ಬೇಟಾ’, ಕೇ ಸೆರಾ ಸೆರಾ ಖ್ಯಾತಿಯ ‘ಪುಕಾರ್‌’ ಮತ್ತು ‘ಪರಿಂದಾ’ ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.

‘ಧಮಾಲ್‌’ ಚಿತ್ರದಲ್ಲಿ ಮತ್ತೆ ಮಾಧುರಿ ಅನಿಲ್‌ ಜೋಡಿ ಮೋಡಿ ಮಾಡಲಿದೆ. ತಾರಾಗಣದಲ್ಲಿ ಅಜಯ್‌ ದೇವಗನ್‌, ರಿತೇಶ್‌ ದೇಶಮುಖ್‌, ಅರ್ಷದ್‌ ವರ್ಸಿ, ಜಾವೇದ್‌ ಜಾಫ್ರಿ ಸಹ ಇದ್ದಾರೆ.‘ಅನಿಲ್‌ ಜಿ ಜೊತೆಗೆ ಹದಿನೇಳು ವರ್ಷಗಳ ನಂತರ ನಟಿಸುತ್ತಿರುವೆ. ಇದು ಸಂಪೂರ್ಣವಾಗಿ ಮನರಂಜನೆ ನೀಡುವ ಕಾಮಿಡಿ ಚಿತ್ರ. ನಾನೂ ಇದರ ಭಾಗವಾಗಿರುವುದು ಸಹಜವಾಗಿಯೇ ಸಂತೋಷ ತಂದಿದೆ’ ಎನ್ನುವುದು ಮಾಧುರಿ ಉಲಿ.

ಮದುವೆಯ ನಂತರ ಅವರು ಅಮೆರಿಕದಲ್ಲಿಯೇ ವಾಸವಾಗಿದ್ದ ಅವರು, ಒಂದು ದಶಕದ ನಂತರ (2011ರಲ್ಲಿ) ಭಾರತಕ್ಕೆ ಮರಳಿದರು. ‘ಯೇ ಜವಾನಿ ಹೈ ದಿವಾನಿ’ ಚಿತ್ರದಲ್ಲಿ ರಣಬೀರ್‌ ಕಪೂರ್‌ ಜೊತೆಗೆ ಹೆಜ್ಜೆ ಹಾಕಿದ್ದರು. ’ದೇಢ್‌ ಇಷ್ಕಿಯಾಂ’ ಚಿತ್ರದಲ್ಲಿ ನಾಸಿರುದ್ದಿನ್‌ ಶಾ ಜೊತೆಗೆ ನಟಿಸಿ ಸುದ್ದಿ ಮಾಡಿದ್ದರು.

ಇದೀಗ ಅನಿಲ್‌ ಕಪೂರ್‌ ಜೊತೆಗೆ 17 ವರ್ಷಗಳ ನಂತರ ನಟಿಸುತ್ತಿರುವುದು ವಿಶೇಷ ಎನಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.