ಭಾನುವಾರ, ಮಾರ್ಚ್ 7, 2021
20 °C
ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ

ಹಿಜಾಬ್ ಧರಿಸಿ ನಡುರಸ್ತೆಯಲ್ಲಿ ನೃತ್ಯ ಮಾಡಿದ ಮೂವರು ಯುವತಿಯರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹಿಜಾಬ್ ಧರಿಸಿ ನಡುರಸ್ತೆಯಲ್ಲಿ ನೃತ್ಯ ಮಾಡಿದ ಮೂವರು ಯುವತಿಯರು

ತಿರುವನಂತಪುರಂ: ಇಲ್ಲಿನ ಮಲ್ಲಪುರದ ರಸ್ತೆಯಲ್ಲಿ ಹಿಜಾಬ್ ಧರಿಸಿದ ಮೂವರು ಯುವತಿಯರು ಜನರ ನಡುವೆ  ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್‌ನ ‘ಜುಮುಕಿ ಕಮಾಲ್’ ಹಾಡಿಗೆ ಹೆಜ್ಜೆ ಹಾಕಿದ ಯುವತಿಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿವೆ.

ಈ ಮೂವರು ಯುವತಿಯರು ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹೆಜ್ಜೆ ಹಾಕಿದ್ದರು.

ಕೆಲವರು ಯುವತಿಯರ ವರ್ತನೆ ಬಗ್ಗೆ ಕಿಡಿಕಾರಿದ್ದು, ಮುಸ್ಲಿಮ್ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚು ಮಂದಿ ಬೆಂಬಲ ಸೂಚಿಸಿದ್ದು ಶ್ಲಾಘಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.