ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಕ್‌ ಧಕ್‌ ಧಮಾಲ್‌

Last Updated 6 ಡಿಸೆಂಬರ್ 2017, 11:28 IST
ಅಕ್ಷರ ಗಾತ್ರ

ಧಕ್‌ ಧಕ್‌ ಸುಂದರಿ ಮಾಧುರಿ ದೀಕ್ಷಿತ್‌ ಮತ್ತು ನಟ ಅನಿಲ್‌ ಕಪೂರ್‌ ‘ಧಮಾಲ್‌’ ಚಿತ್ರದ ಮೂಲಕ ಮತ್ತೆ ಜೊತೆಯಾಗುತ್ತಿದ್ದಾರೆ. ಈ ಜೋಡಿ 2000ದಲ್ಲಿ ತೆರೆ ಕಂಡ ‘ಪುಕಾರ್‌’ ಚಿತ್ರದಲ್ಲಿ ಇವರು ಒಟ್ಟಿಗೆ ನಟಿಸಿದ್ದೇ ಕೊನೆಯಾಗಿತ್ತು.

ಈ ಚಿತ್ರಕ್ಕೂ ಮೊದಲು, ಏಕ್‌ ದೊ ತೀನ್‌ ಖ್ಯಾತಿಯ ‘ತೇಜಾಬ್‌’, ಧಕ್‌ ಧಕ್‌ ಕರನೆ ಲಗಾ ಹಾಡಿನ ‘ಬೇಟಾ’, ಕೇ ಸೆರಾ ಸೆರಾ ಖ್ಯಾತಿಯ ‘ಪುಕಾರ್‌’ ಮತ್ತು ‘ಪರಿಂದಾ’ ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.

‘ಧಮಾಲ್‌’ ಚಿತ್ರದಲ್ಲಿ ಮತ್ತೆ ಮಾಧುರಿ ಅನಿಲ್‌ ಜೋಡಿ ಮೋಡಿ ಮಾಡಲಿದೆ. ತಾರಾಗಣದಲ್ಲಿ ಅಜಯ್‌ ದೇವಗನ್‌, ರಿತೇಶ್‌ ದೇಶಮುಖ್‌, ಅರ್ಷದ್‌ ವರ್ಸಿ, ಜಾವೇದ್‌ ಜಾಫ್ರಿ ಸಹ ಇದ್ದಾರೆ.

‘ಅನಿಲ್‌ ಜಿ ಜೊತೆಗೆ ಹದಿನೇಳು ವರ್ಷಗಳ ನಂತರ ನಟಿಸುತ್ತಿರುವೆ. ಇದು ಸಂಪೂರ್ಣವಾಗಿ ಮನರಂಜನೆ ನೀಡುವ ಕಾಮಿಡಿ ಚಿತ್ರ. ನಾನೂ ಇದರ ಭಾಗವಾಗಿರುವುದು ಸಹಜವಾಗಿಯೇ ಸಂತೋಷ ತಂದಿದೆ’ ಎನ್ನುವುದು ಮಾಧುರಿ ಉಲಿ.

ಮದುವೆಯ ನಂತರ ಅವರು ಅಮೆರಿಕದಲ್ಲಿಯೇ ವಾಸವಾಗಿದ್ದ ಅವರು, ಒಂದು ದಶಕದ ನಂತರ (2011ರಲ್ಲಿ) ಭಾರತಕ್ಕೆ ಮರಳಿದರು. ‘ಯೇ ಜವಾನಿ ಹೈ ದಿವಾನಿ’ ಚಿತ್ರದಲ್ಲಿ ರಣಬೀರ್‌ ಕಪೂರ್‌ ಜೊತೆಗೆ ಹೆಜ್ಜೆ ಹಾಕಿದ್ದರು. 'ದೇಢ್‌ ಇಷ್ಕಿಯಾಂ’ ಚಿತ್ರದಲ್ಲಿ ನಾಸಿರುದ್ದಿನ್‌ ಶಾ ಜೊತೆಗೆ ನಟಿಸಿ ಸುದ್ದಿ ಮಾಡಿದ್ದರು.

ಇದೀಗ ಅನಿಲ್‌ ಕಪೂರ್‌ ಜೊತೆಗೆ 17 ವರ್ಷಗಳ ನಂತರ ನಟಿಸುತ್ತಿರುವುದು ವಿಶೇಷ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT