ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರಿಗೆ ಶಿಲ್ಪಕಲಾ ಅಕಾಡೆಮಿ ಪುರಸ್ಕಾರ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಕಲಬುರ್ಗಿಯ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪ, ಬೆಂಗಳೂರಿನ ಜಾನ್‌ ದೇವರಾಜ್‌ ಸೇರಿ ಒಟ್ಟು ಐದು ಮಂದಿ ಹಿರಿಯ ಶಿಲ್ಪಿಗಳನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿದೆ.

ಮೈಸೂರು ಜಿಲ್ಲೆಯ ಶ್ಯಾಮಸುಂದರ್‌ ಭಟ್‌. ಬಿ (ಸಂಪ್ರದಾಯ ಶಿಲ್ಪ), ವಿಜಯಪುರ ಜಿಲ್ಲೆಯ ಮಾನಪ್ಪ ಶಂಕ್ರಪ್ಪ ಬಡಿಗೇರ (ರಥ ಶಿಲ್ಪ), ಬೆಂಗಳೂರಿನ ಎಂ.ರಾಮಮೂರ್ತಿ (ಸಮಕಾಲೀನ ಶಿಲ್ಪ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇವರಿಗೆ ತಲಾ ₹ 50 ಸಾವಿರ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಆಯ್ಕೆ: ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ‘ವಾರ್ಷಿಕ ಶಿಲ್ಪ ಕಲಾ ಪ್ರದರ್ಶನ 2017’ ಕ್ಕೆ ಶಿಲ್ಪಿಗಳನ್ನು ಆಯ್ಕೆ ಮಾಡಿದೆ. ಆಯ್ಕೆಯಾದ ಶಿಲ್ಪಿಗಳು– ಗೋಪಾಲ ಕಮ್ಮಾರ, ನವ್ಯ.ಎನ್‌, ವಿಶಾಲ್‌.ಕೆ, ದೇವರಾಜ್‌. ಎಂ, ವಿ.ನಾಗರಾಜ್‌, ಮಹೇಶ್‌.ಟಿ.ಆರ್‌, ಮೌನೇಶ್‌ ಕೆ ಕಂಬಾರ, ವಿಠ್ಠಲ್‌ ರಾಯಪ್ಪ ಕಂಬಾರ, ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ,ಎನ್‌.ದಕ್ಷಿಣಾಮೂರ್ತಿ. ಪ್ರದರ್ಶನದ ದಿನಾಂಕ ಶೀಘ್ರವೇ ಪ್ರಕಟಿಸಲಾಗುವುದು ಎಂದು ಶಿಲ್ಪಕಲಾ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT