ಸೋಮವಾರ, ಮಾರ್ಚ್ 8, 2021
31 °C
ತಾಹೀರ್‌ ಭೂಗತ ಪಾತಕಿ ರವಿಪೂಜಾರಿಯ ಸಹಚರ

ಸಿಸಿಬಿ ಬಲೆಗೆ ಬಿದ್ದವನು ಶಾರ್ಪ್‌ ಶೂಟರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಸಿಬಿ ಬಲೆಗೆ ಬಿದ್ದವನು ಶಾರ್ಪ್‌ ಶೂಟರ್!

ಬೆಂಗಳೂರು: ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ನಾಡಪಿಸ್ತೂಲ್‌ಗಳನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿತನಾಗಿರುವ ತಾಹೀರ್‌ ಹುಸೇನ್‌ ಅಲಿಯಾಸ್ ಅನೂಪ್‌ ಗೌಡ (37), ಭೂಗತ ಪಾತಕಿ ರವಿಪೂಜಾರಿ ಗ್ಯಾಂಗ್‌ನ ಶಾರ್ಪ್‌ ಶೂಟರ್!

ಸಿಸಿಬಿ ಪೊಲೀಸರ ವಿಚಾರಣೆಯಿಂದ ಈ ಸಂಗತಿ ಗೊತ್ತಾಗಿದೆ. ಆರೋಪಿ ಬಳಿ 7.65 ಎಂ.ಎಂನ ನಾಡಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳು ಪತ್ತೆಯಾಗಿವೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಇದೇ ಮಾದರಿಯ ಪಿಸ್ತೂಲ್ ಬಳಕೆಯಾಗಿತ್ತು. ಈ ಕಾರಣದಿಂದ ಗೌರಿ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಕೂಡ ತಾಹಿರ್ ಹುಸೇನ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲು ನಿರ್ಧರಿಸಿದೆ.

ಆ ಪ್ರಭಾವಿ ಯಾರು?

‘ನಗರದ ಉದ್ಯಮಿಯೊಬ್ಬರನ್ನು ಕೊಲ್ಲಲು‌ ಪ್ರಭಾವಿ ವ್ಯಕ್ತಿಯೊಬ್ಬರು ತಾಹೀರ್‌ಗೆ ಸುಪಾರಿ ಕೊಟ್ಟಿದ್ದರು. ಆ ಪ್ರಭಾವಿಯ ವ್ಯಕ್ತಿಯ ಹೆಸರನ್ನು ಕಮಿಷನರ್ ಟಿ.ಸುನೀಲ್‌ಕುಮಾರ್ ಅವರೇ ಬುಧವಾರ ಬಹಿರಂಗಪಡಿಸಲಿದ್ದಾರೆ’ ಎಂದು ಸಿಸಿಬಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಗೌರಿ ಲಂಕೇಶ್ ಹತ್ಯೆ, 2015ರ ಸೆಪ್ಟೆಂಬರ್‌ನಲ್ಲಿ ಸಂಜಯ್‌ನಗರದಲ್ಲಿ ನಡೆದಿದ್ದ ಉದ್ಯಮಿ ಸುರೇಂದ್ರ ಪರಚೂರಿ ಹತ್ಯೆ ಹಾಗೂ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣಗಳ ಬಗ್ಗೆಯೂ ತಾಹೀರ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

* ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಹೀರ್‌ನನ್ನು ನಾವು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ

–ಅನುಚೇತ್, ಎಸ್‍ಐಟಿ ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.