ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಗೌರವಗಳೊಂದಿಗೆ ಶಶಿ ಕಪೂರ್‌ ಅಂತ್ಯಕ್ರಿಯೆ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಹಿಂದಿ ಚಲನಚಿತ್ರರಂಗದ ದಂತಕಥೆ ಶಶಿ ಕಪೂರ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಮಧ್ಯಾಹ್ನ ನೆರವೇರಿತು.

ಇಲ್ಲಿನ ಸಾಂತಾಕ್ರೂಜ್ ಹಿಂದೂ ವಿದ್ಯುತ್‌ ಚಿತಾಗಾರದಲ್ಲಿ ನಡೆದ ಅಂತ್ಯಕ್ರಿಯೆಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಸುರಿಯುತ್ತಿದ್ದ ಮಳೆಯ ನಡುವೆಯೂ ನೂರಾರು ಜನ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು. ಶಶಿ ಕಪೂರ್‌ ಅವರ ಮಕ್ಕಳಾದ ಕುನಾಲ್‌, ಕರಣ್‌, ಸಂಜನಾ ಮತ್ತು ಕುಟುಂಬದ ಇತರ ಸದಸ್ಯರು ಸ್ಥಳದಲ್ಲಿದ್ದರು.

‘ಅವರನ್ನು ಪ್ರೀತಿಯಿಂದ ಅಂಕಲ್‌ ಎಂದು ಕರೆಯುತ್ತಿದ್ದೆ. ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೆ. ಅವರ ನಿಧನ ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಬಾಲಿವುಡ್‌ಗೇ ದೊಡ್ಡ ನಷ್ಟ’ ಎಂದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸೈಫ್‌ ಅಲಿ ಖಾನ್‌ ಪ್ರತಿಕ್ರಿಯಿಸಿದ್ದಾರೆ. ಸೈಫ್‌ ಪತ್ನಿ ಕರೀನಾ ಕಪೂರ್‌ ಅವರು ಶಶಿ ಕಪೂರ್‌ ಅವರ ಅಣ್ಣನ ಮಗಳು.

**

ಅಂತಿಮ ನಮನ ಸಲ್ಲಿಸಿದವರು

ಅಮಿತಾಭ್‌ ಬಚ್ಚನ್‌, ಅಭಿಷೇಕ್‌ ಬಚ್ಚನ್‌, ಶ್ಯಾಮ್‌ ಬೆನಗಲ್‌, ಅಮೀರ್‌ ಖಾನ್‌, ಶಾರುಖ್‌ ಖಾನ್‌, ನಾಸಿರುದ್ದೀನ್‌ ಷಾ, ಅನಿಲ್‌ ಕಪೂರ್‌, ದೀವಾರ್‌ ಚಿತ್ರದ ‘ಮೇರೆ ಪಾಸ್‌ ಮಾ ಹೈ’ ಎಂಬ ಶಶಿಕಪೂರ್‌ ಅವರ ಜನಪ್ರಿಯ ಡೈಲಾಗ್‌ನ ಬರಹಗಾರ ಸಲೀಮ್‌ ಖಾನ್‌, ಹನ್ಸಲ್‌ ಮೆಹ್ತಾ, ನಂದಿತಾ ದಾಸ್‌, ಲಾರಾ ದತ್ತಾ, ಅವರ ಪತಿ ಮಹೇಶ್‌ ಭೂಪತಿ, ಮಹಾರಾಷ್ಟ್ರದ ರಾಜಕೀಯ ಮುಖಂಡ ರಾಮದಾಸ್‌ ಆಠವಳೆ, ಜಾವೇದ್‌ ಅಖ್ತರ್‌, ಸಂಜಯ್‌ ದತ್‌, ಪೂನಮ್‌ ಧಿಲ್ಲಾನ್‌, ಶಕ್ತಿ ಕಪೂರ್‌, ಸುಪ್ರಿಯಾ ಪಾಠಕ್‌, ಸರೋಜ್‌ ಖಾನ್‌...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT