7

ಇಂದಿರಾ ಕ್ಯಾಂಟೀನ್‌ಗೆ ಸ್ಥಳ ಪರಿಶೀಲನೆ

Published:
Updated:

ಕೊಳ್ಳೇಗಾಲ: ನಗರದ ಸರ್ಕಾರಿ ಆಸ್ಪತ್ರೆಯ ಮುಂಭಾಗದ ತಹಶೀಲ್ದಾರ್‌ ವಸತಿ ಗೃಹದ ಬಳಿ 62x62 ಅಡಿ ಅಳತೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮಂಗಳವಾರ ಪೌರಾಯುಕ್ತ ಡಿ.ಕೆ. ಲಿಂಗರಾಜು ಸ್ಥಳ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಸರ್ಕಾರದ ಆದೇಶದ ಮೇರೆಗೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಕೆಇಎಫ್ ಇನ್ಫ್ರಾ ಸಂಸ್ಥೆಯಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸ್ಥಳವನ್ನು ಅಂತಿಮಗೊಳಿಸಿದ ನಂತರ ಮೂರು ವಾರದಲ್ಲಿ ಕ್ಯಾಂಟೀನ್ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು. ನಗರಸಭೆ ಅಧ್ಯಕ್ಷ ಶಾಂತರಾಜು, ಜಿಲ್ಲಾ ಯೋಜನಾಧಿಕಾರಿ ಸುರೇಶ್, ಎಂಜಿನಿಯರ್ ನಟರಾಜು, ಕೆಇಎಫ್ ಇನ್ಫ್ರಾ ಸಂಸ್ಥೆಯ ಮಣಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry