7

ಕೃತ್ಯ ಎಸಗಿದವರ ಬಂಧಿಸಿ, ಶಿಕ್ಷಿಸಲು ಒತ್ತಾಯ

Published:
Updated:
ಕೃತ್ಯ ಎಸಗಿದವರ ಬಂಧಿಸಿ, ಶಿಕ್ಷಿಸಲು ಒತ್ತಾಯ

ಚಿಕ್ಕಮಗಳೂರು: ‘ದತ್ತ ಜಯಂತಿಯ ದಿವಸ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್‌ಸ್ವಾಮಿ ದರ್ಗಾ ಆವರಣದ ನಿರ್ಬಂಧಿತ ಪ್ರದೇಶದಲ್ಲಿ ಭಗವಧ್ವಜ ನೆಟ್ಟವರು, ಗೋರಿ ಹಾನಿಗೊಳಿಸಿದವರನ್ನು ಬಂಧಿಸಿ, ಶಿಕ್ಷಿಸಬೇಕು’ ಎಂದು ಹಜರತ್‌ ದಾದಾ ಹಯಾತ್‌ ಮೀರ್‌ ಖಲಂದರ್‌ ಸಮಿತಿ ಅಧ್ಯಕ್ಷ ಸಿರಾಜ್‌ ಹುಸೇನ್‌ ಇಲ್ಲಿ ಮಂಗಳವಾರ ಒತ್ತಾಯಿಸಿದರು.

‘ಈ ಅಹಿತಕರ ಘಟನೆಗಳು ಪೂರ್ವ ನಿಯೋಜಿತ ಕೃತ್ಯಗಳು. ಇವು ರಾಜಕೀಯ ಪ್ರೇರಿತ. ಶಾಂತಿಯನ್ನು ಕದಡಲು ಇಂಥ ಕೃತ್ಯಗಳಿಗೆ ಕೈಹಾಕಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು. ‘ಕೋಮು ಗಲಭೆ, ಗಲಾಟೆ ಸೃಷ್ಟಿಸುವವರನ್ನು ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ದತ್ತಪೀಠಕ್ಕೆ ಸಂಬಂಧಿಸಿದಂತೆ 1913ರ ಕಾಲಘಟ್ಟದ ದಾಖಲೆಗಳಿವೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಹಾಗಿದ್ದರೆ ಅವುಗಳನ್ನು ತೋರಿಸಲಿ. ನಮ್ಮ ಬಳಿಯೂ ಟಿಪ್ಪು ಸುಲ್ತಾನ್‌ ಆಳ್ವಿಕೆಯ 1787ರ ಕಾಲಘಟ್ಟದ ದಾಖಲೆಗಳು ಇವೆ. ದಾಖಲೆಗಳನ್ನು ಆಧರಿಸಿ ಚರ್ಚೆಗೆ ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದರು.

‘ಬಾಬಾಬುಡನ್‌ಗಿರಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 1989ರಲ್ಲಿ ಕೋರ್ಟ್‌ ಆದೇಶ ನೀಡಿದೆ. ಇನ್ನು ಮೂರು ತಿಂಗಳಲ್ಲಿ ಊರುಸ್‌ ಆಚರಣೆ ಇದೆ. ಕೋರ್ಟ್‌ ಆದೇಶದಂತೆ ಊರುಸ್‌ ಆಚರಣೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು. ಮುಖಂಡರಾದ ಮುಬಾರಕ್‌, ಔರಂಗ್‌ ಪಾಷಾ, ಮಹಮ್ಮದ್‌ ಸಫ್ವಾನ್‌, ಶಂಸುದ್ದೀನ್‌, ಯೂಸುಫ್‌ ಹಾಜಿ ಇದ್ದರು.ಚಿಕ್ಕಮಗಳೂರು: ‘ದತ್ತ ಜಯಂತಿಯ ದಿವಸ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್‌ಸ್ವಾಮಿ ದರ್ಗಾ ಆವರಣದ ನಿರ್ಬಂಧಿತ ಪ್ರದೇಶದಲ್ಲಿ ಭಗವಧ್ವಜ ನೆಟ್ಟವರು, ಗೋರಿ ಹಾನಿಗೊಳಿಸಿದವರನ್ನು ಬಂಧಿಸಿ, ಶಿಕ್ಷಿಸಬೇಕು’ ಎಂದು ಹಜರತ್‌ ದಾದಾ ಹಯಾತ್‌ ಮೀರ್‌ ಖಲಂದರ್‌ ಸಮಿತಿ ಅಧ್ಯಕ್ಷ ಸಿರಾಜ್‌ ಹುಸೇನ್‌ ಇಲ್ಲಿ ಮಂಗಳವಾರ ಒತ್ತಾಯಿಸಿದರು.

‘ಈ ಅಹಿತಕರ ಘಟನೆಗಳು ಪೂರ್ವ ನಿಯೋಜಿತ ಕೃತ್ಯಗಳು. ಇವು ರಾಜಕೀಯ ಪ್ರೇರಿತ. ಶಾಂತಿಯನ್ನು ಕದಡಲು ಇಂಥ ಕೃತ್ಯಗಳಿಗೆ ಕೈಹಾಕಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು.‘ಕೋಮು ಗಲಭೆ, ಗಲಾಟೆ ಸೃಷ್ಟಿಸುವವರನ್ನು ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ದತ್ತಪೀಠಕ್ಕೆ ಸಂಬಂಧಿಸಿದಂತೆ 1913ರ ಕಾಲಘಟ್ಟದ ದಾಖಲೆಗಳಿವೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಹಾಗಿದ್ದರೆ ಅವುಗಳನ್ನು ತೋರಿಸಲಿ. ನಮ್ಮ ಬಳಿಯೂ ಟಿಪ್ಪು ಸುಲ್ತಾನ್‌ ಆಳ್ವಿಕೆಯ 1787ರ ಕಾಲಘಟ್ಟದ ದಾಖಲೆಗಳು ಇವೆ. ದಾಖಲೆಗಳನ್ನು ಆಧರಿಸಿ ಚರ್ಚೆಗೆ ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದರು.

‘ಬಾಬಾಬುಡನ್‌ಗಿರಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 1989ರಲ್ಲಿ ಕೋರ್ಟ್‌ ಆದೇಶ ನೀಡಿದೆ. ಇನ್ನು ಮೂರು ತಿಂಗಳಲ್ಲಿ ಊರುಸ್‌ ಆಚರಣೆ ಇದೆ. ಕೋರ್ಟ್‌ ಆದೇಶದಂತೆ ಊರುಸ್‌ ಆಚರಣೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು. ಮುಖಂಡರಾದ ಮುಬಾರಕ್‌, ಔರಂಗ್‌ ಪಾಷಾ, ಮಹಮ್ಮದ್‌ ಸಫ್ವಾನ್‌, ಶಂಸುದ್ದೀನ್‌, ಯೂಸುಫ್‌ ಹಾಜಿ ಇದ್ದರು.

ಪೆಟ್ರೋಲ್‌ ಬಾಂಬ್‌ ತಯಾರಿಕೆ: ಕಠಿಣ ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು: ‘ನಗರದಲ್ಲಿ ಡಿ.3ರಂದು ತಮಿಳು ಕಾಲೋನಿಯಲ್ಲಿ ಪೆಟ್ರೋಲ್‌ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಪೆಟ್ರೋಲ್‌ ಬಾಂಬ್‌ ತಯಾರಿಕೆ ಹಿಂದಿರುವ ಘಾತುಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್‌ ಇಲ್ಲಿ ಮಂಗಳವಾರ ಒತ್ತಾಯಿಸಿದರು.

‘ಕೆಲ ಸಮಾಜಘಾತುಕ ಶಕ್ತಿಗಳು ಜಿಲ್ಲೆಯಲ್ಲಿ ಶಾಂತಿ ಕದಡಲು ಹುನ್ನಾರ ನಡೆಸಿವೆ. ಪೆಟ್ರೋಲ್‌ ಬಾಂಬ್‌ ತಯಾರಿಕೆ ಹಿಂದೆ ಭಯೋತ್ಪಾದಕ ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವ ಶಂಕೆ ಇದೆ. ಆ ವ್ಯಕ್ತಿಗಳನ್ನು ಬಂಧಿಸಿ ತನಿಖೆ ಮಾಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಡಿ.2ರಂದು ಶೋಭಾಯಾತ್ರೆ ಹಾಗೂ ಡಿ.3ರಂದು ದತ್ತ ಜಯಂತಿ ವಿಫಲಗೊಳಿಸಲು ಕೆಲವರು ಸಂಚು ಮಾಡಿದ್ದರು. ಗಲಭೆ ಸೃಷ್ಟಿಸಲು ಯತ್ನಿಸಿದರನ್ನು ಪತ್ತೆ ಹಚ್ಚಿ ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ದತ್ತ ಜಯಂತಿಯಂದು ನಗರದ ಉಪ್ಪಳ್ಳಿ, ರಾಮನಹಳ್ಳಿ, ಕೆ.ಎಂ.ರಸ್ತೆಯ ಟೆಂಡರ್‌ ಚಿಕನ್‌ ಮಳಿಗೆ ಬಳಿ ದತ್ತಭಕ್ತರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಕಲ್ಲು ತೂರಾಟ ಮಾಡಿ ಬೈಕ್‌, ಬಸ್ಸು ಜಖಂಗೊಳಿಸಿದ್ದಾರೆ. ಹಲ್ಲೆ ಮಾಡಿದವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡರಾದ ಸಿ.ಎಚ್‌.ಲೋಕೇಶ್‌, ಎಚ್‌.ಡಿ.ತಮ್ಮಯ್ಯ, ದೇವರಾಜ್‌ಶೆಟ್ಟಿ, ಪುಷ್ಪರಾಜ್‌ ಇದ್ದರು.

ಸಮಾಜ ಘಾತುಕರನ್ನು ಬಗ್ಗುಬಡಿಯಲು ಒತ್ತಾಯ

ಚಿಕ್ಕಮಗಳೂರು: ಧರ್ಮದ ಹೆಸರಿನಲ್ಲಿ ಶಾಂತಿ ಕದಡುವ ಕೋಮುವಾದಿ ಸಮಾಜಘಾತುಕ ಶಕ್ತಿಗಳನ್ನು ಸರ್ಕಾರವು ಮಟ್ಟ ಹಾಕಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಜಿಲ್ಲಾ ಕಾರ್ಯದರ್ಶಿ ಎಚ್‌.ಎಂ.ರೇಣುಕಾರಾಧ್ಯ ಇಲ್ಲಿ ಮಂಗಳವಾರ ಒತ್ತಾಯಿಸಿದರು.

‘ದತ್ತಜಯಂತಿಯ ದಿವಸ ನಡೆದ ಅಹಿತಕರ ಘಟನೆಗಳನ್ನು ಸಿಪಿಐ ಖಂಡಿಸುತ್ತದೆ. ಚುನಾವಣೆ ಹೊಸ್ತಿಲಿನ ವರ್ಷದಲ್ಲಿ ದತ್ತಜಯಂತಿ, ದತ್ತಪೀಠದ ಚಟುವಟಿಕೆಗಳು ಜೋರಾಗಿ ನಡೆಯುತ್ತವೆ. ದತ್ತ ಜಯಂತಿ ಧರ್ಮದ ಹೆಸರಿನ ರಾಜಕೀಯ ಬೇಟೆ ಕಾರ್ಯಕ್ರಮ. ಬಿಜೆಪಿ ವೋಟಿಗಾಗಿ ಈ ಕಾರ್ಯಕ್ರಮ ಮಾಡುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು.

‘ದತ್ತ ಜಯಂತಿಯಂದು ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್‌ಸ್ವಾಮಿ ದರ್ಗಾ ಆವರಣದಲ್ಲಿ ನಡೆದ ಅಹಿತಕರ ಘಟನೆ, ನಗರದಲ್ಲಿ ಪೆಟ್ರೋಲ್‌ ಬಾಂಬ್‌ ಪತ್ತೆ, ಕಲ್ಲು ತೂರಾಟ, ಹಲ್ಲೆಗಳು ನಡೆದಿವೆ. ಈ ಕೃತ್ಯಗಳನ್ನು ಎಸಗಿದವರನ್ನು ನಿರ್ದಾಕ್ಷಿಣ್ಯವಾಗಿ ಸರ್ಕಾರ ಬಗ್ಗುಬಡಿಯಬೇಕು’ ಎಂದು ಒತ್ತಾಯಿಸಿದರು.

‘ದತ್ತ ಜಯಂತಿ, ಈದ್‌ ಮಿಲಾದ್ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಶ್ಲಾಘನೀಯ’ ಎಂದರು.

‘ಸಿ.ಟಿ.ರವಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಷ್ಟು ವರ್ಷ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತ ಯಾಚಿಸುವ ಅವಕಾಶ ಅವರಿಗಿದ್ದರೂ, ಧಾರ್ಮಿಕ ಕಾರ್ಯಕ್ರಮ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅವರು ಕ್ರಮ ವಹಿಸಿಲ್ಲ. ಸಹಸ್ರಾರು ನಿವೇಶನರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯತ್ತಿದ್ದಾರೆ, ಕಾಫಿ– ಕಾಳುಮೆಣಸಿನ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ, ಇಂಥ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ’ ಎಂದರು.

‘ಜಿಲ್ಲೆಯ ಜವಾಬ್ದಾರಿ ನಿರ್ವಹಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌ ಅವರು ಇತ್ತ ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ ಅಹಿತಕರ ಘಟನೆಗಳ ನಡೆದಿದ್ದರೂ ಇಲ್ಲಿಗೆ ಭೇಟಿ ನೀಡಿಲ್ಲ. ಇದು ಆಡಳಿತ ಪಕ್ಷದ ಬೇಜವಾಬ್ದಾರಿಯನ್ನು ತೋರಿಸುತ್ತದೆ’ ಎಂದು ದೂಷಿಸಿದರು.

ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ರಾಧಾಸುಂದರೇಶ್‌ ಮಾತನಾಡಿ, ‘ದತ್ತ ಜಯಂತಿಗಾಗಿ ಪ್ರತಿವರ್ಷ ಅಪಾರ ಹಣ ವೆಚ್ಚವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಅನುಕೂಲ ಇಲ್ಲ. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಅಷ್ಟೇ. ಇಂಥ ಕಾರ್ಯಕ್ರಮಗಳನ್ನು ಜನರು ಬೆಂಬಲಿಸಬಾರದು’ ಎಂದರು.

ಮುಖಂಡ ಅಮ್ಜದ್‌ ಮಾತನಾಡಿ, ಜನ ಜಾಗೃತಿ ಆಂದೋಲನ ಮಾಡಲು ಸಿಪಿಐ ನಿರ್ಧರಿಸಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry