7

ಮೂಡಿಗೆರೆಯಲ್ಲಿ ಹುಲಿ ಪತ್ತೆ

Published:
Updated:
ಮೂಡಿಗೆರೆಯಲ್ಲಿ ಹುಲಿ ಪತ್ತೆ

ಮೂಡಿಗೆರೆ: ತಾಲ್ಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಹುಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

15 ದಿನಗಳಿಂದ ಬೀಡು ಬಿಟ್ಟಿರುವ ಹುಲಿ, 8 ದಿನಗಳ ಹಿಂದೆ ಉದುಸೆ ಗ್ರಾಮದ ಮಂಜೇಗೌಡ ಅವರ ದನ ಹಾಗೂ ಯು.ಬಿ. ನಾಗೇಶ್‌ ಅವರ ಎರಡು ದನಗಳನ್ನು ಕೊಂದುಹಾಕಿತ್ತು. ಜನರಿಂದ ಒತ್ತಡ ಬಂದ ಮೇರೆಗೆ ಅರಣ್ಯ ಇಲಾಖೆ ಆಯಕಟ್ಟಿನ ಪ್ರದೇಶಗಳಲ್ಲಿ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿತ್ತು.

ಗ್ರಾಮದ ರವಿ ಅವರ ಕಾಫಿ ತೋಟದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೋಮವಾರ ತಡ ರಾತ್ರಿ 4 ವರ್ಷ ಪ್ರಾಯದ ಹುಲಿ ಕಾಣಿಸಿಕೊಂಡಿದೆ. ರಾತ್ರಿ 9.25ಕ್ಕೆ ಕಾಫಿ ತೋಟದಲ್ಲಿರುವ ಪೊಟರೆಗೆ ಮಾಂಸದ ತುಂಡೊಂದನ್ನು ತಂದು ಇರಿಸಿಕೊಂಡಿರುವ 156 ಛಾಯಾಚಿತ್ರಗಳನ್ನು ಸಿಸಿ ಕ್ಯಾಮೆರಾ ಸೆರೆ ಹಿಡಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry