ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತರಿ ಕೋಲ್ ಮಂದ್ ಸಂಭ್ರಮ

Last Updated 6 ಡಿಸೆಂಬರ್ 2017, 8:37 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ನಿಸರ್ಗದ ಮಡಿಲಿನ ಕುಂದ ತಪ್ಪಲಿನಲ್ಲಿ ಮಂಗಳವಾರ ಹುತ್ತರಿ ಕೋಲ್ ಮಂದ್ ವಿಜೃಂಭಣೆಯಿಂದ ಜರುಗಿತು. ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಕಪ್ಪೆಯಾಟ್, ಪರೆಯಕಳಿ ನೃತ್ಯಗಳು ಸಭಿಕರನ್ನು ರಂಜಿಸಿದವು. ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್‌ನಲ್ಲಿ ಬೊಟ್ಟಿಯತ್ ನಾಡ್, ಬೇರಳಿನಾಡ್, ಕುತ್ತ್‌ ನಾಡ್ ಆಶ್ರಯದಲ್ಲಿ ನಡೆದ ಕೋಲ್ ಮಂದ್‌ನಲ್ಲಿ ಪಾಲ್ಗೊಂಡಿದ್ದ ಜನತೆ ಕಲಾವಿದರ ನೃತ್ಯ ಪ್ರದರ್ಶನ ನೋಡಿ ಆನಂದಿಸಿದರು. ದಟ್ಟ ಹಸಿರಿನ ಬಯಲಿನಲ್ಲಿ ನಡೆದ ನೃತ್ಯಗಳಲ್ಲಿ ಕಲಾವಿದರು ಸಾಂಪ್ರದಾಯಿಕ ಉಡುಪು ಧರಿಸಿ ನರ್ತಿಸಿದರು.

ಬೆಳಿಗ್ಗೆ 9.30ಕ್ಕೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಉದ್ಘಾಟಿಸಿ, ಆಧುನಿಕತೆಯ ನಡುವೆಯೂ ಕೋಲ್ ಮಂದ್‌ನಂತಹ ಮೂಲ ಕಲೆಗಳನ್ನು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕಾಮಾಡ ರಾಜೀವ್ ಬೋಪಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೈಮುಡಿಕೆ ಮಂದ್‌ನ ಕಾರ್ಯದರ್ಶಿ ಅರುಣ್ ಅಪ್ಪಣ್ಣ, ಮಳುವಂಡ ಪೂಣಚ್ಚ, ಉಮೇಶ್ ಕೇಚಮಯ್ಯ, ಬಾಂಡ್ ಗಣಪತಿ, ಪ್ರಭು ಪೂಣಚ್ಚ, ಪಂದಿಮಾಡ್ ರಮೇಶ್, ತೀತಿಮಾಡ ವಾಸು, ಕಡೇಮಾಡ ಪ್ರಕಾಶ್ ಉತ್ತಯ್ಯ, ಎ.ಬಿ.ಮೋಹನ್, ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT