ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ ಬೆಳೆಗೆ ‘ಪಲ್ಸ್‌ ಮ್ಯಾಜಿಕ್‌’ ಉಪಯುಕ್ತ

Last Updated 6 ಡಿಸೆಂಬರ್ 2017, 8:53 IST
ಅಕ್ಷರ ಗಾತ್ರ

ಕುಷ್ಟಗಿ: ತೇವಾಂಶದ ಕೊರತೆ ನಡುವೆಯೂ ಹಿಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ವಿವಿಧ ಕಡೆ ಬೆಳೆದಿರುವ ಕಡಲೆ ಬೆಳೆ ಉತ್ತಮವಾಗಿದೆ. ಟೆಂಗುಂಟಿ ರಸ್ತೆಯಲ್ಲಿರುವ ಕಳಕಪ್ಪ ನಾಯಕವಾಡಿ ಅವರ ಎರಡೂವರೆ ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿರುವ ಕಡಲೆ ಉತ್ತಮವಾಗಿದ್ದು, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ ಅವರು ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ ಅವರು, ಸದ್ಯ ಕಡಲೆ ಬೆಳೆ ಹೂವಾಡುವ ಮತ್ತು ಕಾಯಿಕಟ್ಟುವ ಹಂತದಲ್ಲಿದ್ದು , ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಬೇಕು. ಯೂರಿಯಾ ಇಲ್ಲದ ಮತ್ತು ರಂಜಕ, ಪೊಟಾಷ್‌ ಇರುವ ಸಿದ್ಧ ರಾಸಾಯನಿಕ ಗೊಬ್ಬರವನ್ನು ಬೆಳೆಗೆ ಪ್ರತಿ ಲೀಟರ್‌ ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಬೆರೆಸಿ ತಂಪು ವಾತಾವರಣದಲ್ಲಿ ಸಿಂಪಡಿಸಬೇಕು ಎಂದರು.

ಕಡಲೆ ಹೂ ಮತ್ತು ಕಾಯಿಕಟ್ಟುವ ಹಂತದಲ್ಲಿರುವಾಗ ಸಸ್ಯವರ್ಧಕಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ಹೂವು ಕಟ್ಟಲು ಕಾಯಿ ಬಲಿಯುವುದಕ್ಕೆ ಬೇಕಾದ ಅಮೈನೊ ಆ್ಯಸಿಡ್‌ ಇರುವ ಟಾನಿಕ್‌ ಬಳಸಬೇಕು ಎಂದು ಸಲಹೆ ನೀಡಿದರು.

ಪಲ್ಸ್‌ ಮ್ಯಾಜಿಕ್‌: ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ‘ಪಲ್ಸ್‌ ಮ್ಯಾಜಿಕ್‌’ ಎಲ್ಲ ಸೂಕ್ಷ್ಮ ಪೋಷಕಾಂಶ (ಮೈಕ್ರೋ ನ್ಯೂಟ್ರಿಯಂಟ್ಸ್‌) ಮತ್ತು ಜಿಬ್ರಾಲಿಕ್‌ ಆ್ಯಸಿಡ್‌ ಇದರಲ್ಲಿದ್ದು ಕಾಯಿ ಮತ್ತು ಕಾಳು ಗಟ್ಟಿಯಾಗುವುದಕ್ಕೆ ಸಹಕರಿಸುತ್ತದೆ.

ಎಕರೆಗೆ 2 ಕೆ.ಜಿ ಪಲ್ಸ್‌ ಮ್ಯಾಜಿಕ್‌ ಅಗತ್ಯವಾಗಿದ್ದು, ಪ್ರತಿ ಲೀಟರ್‌ ನೀರಿಗೆ 10 ಗ್ರಾಂನಂತೆ ಬೆರೆಸಿ ಸಿಂಪಡಿಸಬೇಕು. ಇದರಿಂದ ಕಾಯಿ ಬೇಗನೆ ಮಾಗಿ ಕಾಯಿಕೊರಕ ಹುಳುವಿನ ಕಾಟ ಇರುವುದಿಲ್ಲ. ಇದು ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಲಭ್ಯವಿದೆ. ಬೇಡಿಕೆ ಸಲ್ಲಿಸಿದರೆ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಖಾಸಗಿ ಮಾರಾಟಗಾರರಿಗೂ ವಿತರಿಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT