7

ವಿಜೃಂಭಣೆಯ ಉತ್ತಿನ ಎಲ್ಲಮ್ಮ ರಥೋತ್ಸವ

Published:
Updated:

ಜಾಲಹಳ್ಳಿ: ಪಟ್ಟಣ ಸೇರಿದಂತೆ ಸುತ್ತಮತ್ತಲ್ಲಿನ ಹಳ್ಳಿಗಳ ಅಪಾರ ಸಂಖ್ಯೆಯ ಭಕ್ತರ ಜಯಘೋಷ, ಹರ್ಷೋದ್ಘಾರಗಳ ನಡುವೆ ಶಕ್ತಿ ದೇವತೆ ಉತ್ತಿನ ಎಲ್ಲಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿರುವ ಮೂಲ ಎಲ್ಲಮ್ಮ ದೇವಸ್ಥಾನದಿಂದ ಹಂಪರಗುಂದಿ ಸೀಮಾಂತದಲ್ಲಿರುವ ಜಾತ್ರೆ ನಡೆಯುವ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಸಾಗಿಬಂದ ದೇವಿಯ ಉತ್ಸವ ಮೂರ್ತಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರ ಜಯ­ ಘೋಷ­­ದೊಂದಿಗೆ ರಥೋತ್ಸವ ಚಾಲನೆ ಪಡೆದುಕೊಂಡಿತು.

ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ಹೂ, ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಅಲ್ಲಿಯವರೆಗೂ ಭಕ್ತರು ಉಪವಾಸ ಇದ್ದು ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ರಾಜ್ಯದೆಲ್ಲೆಡೆ ನೆಲೆಸಿರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

ಈ ಜಾತ್ರೆಗೆ ವಿಶೇಷವಾಗಿ ಭಕ್ತರು ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ ಎಣ್ಣೆ ಬದನೆಕಾಯಿಯ ಬುತ್ತಿಯನ್ನು ಮಾತ್ರ ತಂದು ದೇವತೆಗೆ ಪೂಜೆ ಸಲ್ಲಿಸಿದ ನಂತರ ಬೆಟ್ಟದಲ್ಲಿ ಊಟ ಮಾಡಿ ಮನೆಗೆ ಹೋಗುವ ವಾಡಿಕೆಯಿದೆ.

ಇನ್ನೊಂದು ವಿಶೇಷತೆ ಎಂದರೆ ಜಾತ್ರೆ ನಡೆದ ದಿನದಂದು ಯಾರೂ ಅಲ್ಲಿ ವಾಸ ಮಾಡದೇ ರಾತ್ರಿ 10 ಗಂಟೆಯ ಒಳಗಾಗಿ ಎಲ್ಲರೂ ಪಟ್ಟಣ ಸೇರಿಕೊಳ್ಳುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry