ನೀಲಿ ನಾಲಿಗೆ ರೋಗಕ್ಕೆ 70 ಕುರಿ ಬಲಿ

7

ನೀಲಿ ನಾಲಿಗೆ ರೋಗಕ್ಕೆ 70 ಕುರಿ ಬಲಿ

Published:
Updated:

ಪಾವಗಡ: ಕೆಲ ದಿನಗಳಿಂದ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ, ಕಡಮಲಕುಂಟೆ, ಕಣಿವೇನಹಳ್ಳಿ, ದೊಮ್ಮತಮರಿ ನಾಗಲಮಡಿಕೆ ಸೇರಿದಂತೆ 18 ಗ್ರಾಮಗಳಲ್ಲಿ 70ಕ್ಕೂ ಹೆಚ್ಚು ಕುರಿಗಳು ನೀಲಿ ನಾಲಿಗೆ ರೋಗದಿಂದ ಸಾವನ್ನಪ್ಪಿವೆ.

‘ಕುರಿಗಳಿಗೆ ಆರಂಭದಲ್ಲಿ ಜ್ವರ ಕಾಣಿಸಿಕೊಂಡು, ಕಣ್ಣು, ಮೂಗು, ಬಾಯಿಯಿಂದ ರಸ ಸವ್ರಿಸುತ್ತದೆ. ನಿತ್ರಾಣಗೊಳ್ಳುತ್ತವೆ. ಮುಖ ಊದಿಕೊಂಡು 5 ರಿಂದ 6 ದಿನಗಳಲ್ಲಿ ಸಾಯುತ್ತಿವೆ’ ಎಂದು ಕೊಡಮಡುಗು ಗ್ರಾಮದ ಕುರಿಗಾಹಿ ಹನುಮಪ್ಪ ತಿಳಿಸಿದರು.

‘ಈ ಬಾರಿ ಮಳೆ ಹೆಚ್ಚು ಬಿದ್ದಿರುವುದರಿಂದ ರೋಗಾಣು ಹೆಚ್ಚು ಪ್ರಸಾರ ಹೊಂದಿ ಕಾಯಿಲೆ ಹರಡುತ್ತಿದೆ. ರೋಗ ನಿಯಂತ್ರಣಕ್ಕಾಗಿ ಹೆಬ್ಬಾಳದ ಪಶು ಆರೋಗ್ಯ ಜೈವಿಕ ಸಂಸ್ಥೆ 5000 ಡೋಸ್ ಲಸಿಕೆಯನ್ನು ತಾಲ್ಲೂಕಿಗೆ ಪೂರೈಸಿದೆ. ಲಸಿಕೆ ಹಾಕಲಾಗುತ್ತಿದೆ’ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೋಗದ ಲಕ್ಷಣ ಕಂಡು ಬಂದ ಕೂಡಲೇ ಕುರಿಗಾಹಿಗಳು ರೋಗ ಪೀಡಿತ ಕುರಿಗಳನ್ನು ಆರೋಗ್ಯವಂತ ಕುರಿಗಳಿಂದ ಬೇರ್ಪಡಿಸಬೇಕು. ಇಲ್ಲದಿದ್ದರೆ ಎಲ್ಲ ಕುರಿಗಳಿಗೂ ರೋಗ ವ್ಯಾಪಿಸುವ ಸಾಧ್ಯತೆ ಇದೆ. ಮಂದೆಯ ಬಳಿ ಬೇವಿನ ಸೊಪ್ಪಿನ ಹೊಗೆ ಹಾಕಿ ನೊಣ, ಸೊಳ್ಳೆಗಳನ್ನು ನಿಯಂತ್ರಿಸಬೇಕು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry