ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆಯುವುದು ಹೇಗೆ?

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳ ಮೂಲಕ ಫೋಟೊ ತೆಗೆಯುವ ಅಭ್ಯಾಸ ಹಲವರದ್ದು. ಆದರೆ, ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆಯುವುದು ಹೇಗೆ ಎಂಬುದು ಹಲವರಿಗೆ ಗೊತ್ತಿರುವುದಿಲ್ಲ. ಇದು ಸಣ್ಣ ಸಂಗತಿ ಎನಿಸಿದರೂ ಎಷ್ಟೋ ಮಂದಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆಯುವ ಬಗ್ಗೆ ಈ ವಾರ ತಿಳಿಯೋಣ.

ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ವಾಲ್ಯೂಮ್ ಬಟನ್‌ನ ಕೆಳಭಾಗ ಮತ್ತು ಪವರ್/ಸ್ಕ್ರೀನ್‌ ಲಾಕ್‌ ಬಟನ್‌ ಅನ್ನು ಒಟ್ಟಿಗೆ ಒತ್ತುವ ಮೂಲಕ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳ ಬಹುದು. ನೀವು ಯಾವುದಾದರು ಒಂದು ಪುಟ ಅಥವಾ ಸ್ಕ್ರೀನ್‌ ಅನ್ನು ಚಿತ್ರವಾಗಿ ಉಳಿಸಿಕೊಳ್ಳಬೇಕೆಂದರೆ ಈ ರೀತಿ ಸ್ಕ್ರೀನ್‌ ಶಾಟ್‌ ತೆಗೆದು ಕೊಳ್ಳಬಹುದು.

ಕೆಲವು ಡಿವೈಸ್‌ಗಳಲ್ಲಿ ಹೋಮ್‌ ಬಟನ್‌ ಮತ್ತು ಪವರ್/ಸ್ಕ್ರೀನ್‌ ಲಾಕ್‌ ಬಟನ್‌ ಅನ್ನು ಒಟ್ಟಿಗೆ ಒತ್ತಿದರೆ ಸ್ಕ್ರೀನ್‌ ಶಾಟ್‌ ಸಿಗುತ್ತದೆ. ತೆಗೆದುಕೊಂಡ ಸ್ಕ್ರೀನ್ ಶಾಟ್‌ನ ಚಿತ್ರ ನಿಮ್ಮ ಗ್ಯಾಲರಿಯಲ್ಲಿ ಉಳಿದುಕೊಂಡಿರುತ್ತದೆ. ನಿಮ್ಮ ಡಿವೈಸ್‌ನಲ್ಲಿರುವ ಫೋಟೊ ಎಡಿಟ್‌ ಆ್ಯಪ್‌ ಮೂಲಕ ಈ ಸ್ಕ್ರೀನ್ ಶಾಟ್‌ ಅನ್ನು ನೀವು ಎಡಿಟ್‌ ಮಾಡಿಕೊಳ್ಳಬಹುದು.

ಸ್ಕ್ರೀನ್‌ ಶಾಟ್‌ ತೆಗೆಯಲು ಬರುವುದಿಲ್ಲ ಎಂದು ಪಕ್ಕದಲ್ಲಿರುವವರಿಗೆ ಡಿವೈಸ್‌ ಕೊಟ್ಟು ಕೇಳುವ ಬದಲು ನೀವೇ ಒಮ್ಮೆ ಸ್ಕ್ರೀನ್‌ ಶಾಟ್‌ ತೆಗೆದು ನೋಡಿ. ಸ್ಕ್ರೀನ್‌ ಶಾಟ್‌ ಅನ್ನು ನೀವು ನೇರವಾಗಿ ಬೇಕೆಂದವರ ಜತೆಗೆ ಹಂಚಿಕೊಳ್ಳಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT