ಶನಿವಾರ, ಮಾರ್ಚ್ 6, 2021
18 °C

ಸ್ವಚ್ಛಮೀನು ಖರೀದಿಗೆ ಆನ್‌ಲೈನ್‌ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಚ್ಛಮೀನು ಖರೀದಿಗೆ ಆನ್‌ಲೈನ್‌ ವೇದಿಕೆ

–ನನೀನ್‌ ಕುಮಾರ್ ಜಿ.

ಅಂಜಲ್, ಪಾಂಪ್ಲೆಟ್, ಬಂಗುಡೆ, ಬೂತಾಯಿ, ಏಡಿ, ಸಿಗಡಿ ಈ ಹೆಸರುಗಳನ್ನು ಕೇಳಿದರೆ ಮತ್ಸಪ್ರಿಯರ ಬಾಯಲ್ಲಿ ನೀರೂರುವುದು ಸಹಜ. ಕರಾವಳಿಯಲ್ಲಿ ತಾಜಾ ಸಿಗುವ ಇಂತಹ ಮೀನುಗಳನ್ನು ಇನ್ನು ಮುಂದೆ ಸಿಲಿಕಾನ್ ಸಿಟಿಯಲ್ಲೂ ಅದೇ ರುಚಿಯಲ್ಲಿ ಸವಿಯಬಹುದು.

ತಮಗೆ ಇಷ್ಟವಾದ ಮೀನನ್ನು ಮನೆಗೆ ತರಿಸಿಕೊಂಡು ಸವಿಯುವ ಅವಕಾಶವನ್ನು ನಗರದ ಸಶಿಮಿ ಫುಡ್ ಸಂಸ್ಥೆಯು ಗ್ರಾಹಕರಿಗೆ ಒದಗಿಸುತ್ತಿದೆ.

ಇದಕ್ಕಾಗಿ ಪೀಣ್ಯ ಬಳಿ ಸುಸಜ್ಜಿತ ಮೀನು ಸಂಸ್ಕರಣಾ ಘಟಕವನ್ನು ತೆರೆದಿದೆ. Buyfish.in ಮೂಲಕ ಗ್ರಾಹಕರು ಆನ್‌ಲೈನ್ ಮೂಲಕ ಮೀನು ಖರೀದಿಸಬಹುದು. ಮೀನನ್ನು ಯಾವ ರೀತಿಯಲ್ಲಿ ತುಂಡು ಮಾಡಬೇಕು, ಮಸಾಲೆ ಸೇರಿಸಬೇಕೊ ಬೇಡವೊ ಎಂಬುದನ್ನು ಆಯ್ಕೆ ಮಾಡುವ ಅವಕಾಶವೂ ಇದೆ.

ವಿದೇಶಗಳಿಂದ ಆಮದು ಮಾಡಿಕೊಂಡ ಅಟ್ಲಾಂಟಿಕ್ ಸಾಲ್ಮಾನ್, ಬಾಸಾ, ವೈಟ್ ಪಾಂಪ್ಲೆಟ್ ಮೊದಲಾದ ಮೀನುಗಳೂ, ಸಿಹಿನೀರಿನ ರಾವು, ಕಾಟ್ಲಾ ಮತ್ಸಗಳೂ ಇವರ ಬಳಿ ಲಭ್ಯವಿದೆ. ಇರಾನ್, ಒಮಾನ್, ಇಂಡೋನೇಷ್ಯಾ, ವಿಯೆಟ್ನಾಂ ದೇಶಗಳಿಂದ ಇವರು ಮೀನನ್ನು ಆಮದು ಮಾಡಿಕೊಳ್ಳುತ್ತಾರೆ.

ಸ್ವಚ್ಛತೆಗೆ ಆದ್ಯತೆ: ಮೀನು ಸಂಸ್ಕರಣಾ ಘಟಕದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆರ್.ಒ ಮೂಲಕ ಶುದ್ಧೀಕರಿಸಿದ ನೀರನ್ನೇ ಮೀನು ಸ್ವಚ್ಛಗೊಳಿಸಲು ಹಾಗೂ ಮಂಜುಗಡ್ಡೆ ತಯಾರಿಸಲು ಬಳಸುತ್ತಾರೆ. ಇದು ಮೀನಿನ ತಾಜಾತನ ಉಳಿಸಲು ಸಹಾಯಕವಾಗುತ್ತದೆ. ಸಂಸ್ಥೆಯು ಸಮುದ್ರ ಮೀನುಗಳನ್ನು ನೇರವಾಗಿ ಮಿನುಗಾರರಿಂದಲೇ ಖರೀದಿಸುತ್ತಿದೆ. ಮೀನು ಕೃಷಿ ನಡೆಸುವ ರೈತರಿಂದಲೂ ಮೀನು ಖರೀದಿಸುವ ಮೂಲಕ ಅವರಿಗೂ ಪ್ರೋತ್ಸಾಹ ನೀಡುತ್ತಿದೆ.

ಹಿಮಾಚಲ ಪ್ರದೇಶದ ಮೀನು: ಹಿಮಾಚಲ ಪ್ರದೇಶದಲ್ಲಿ ಮೀನುಗಾರಿಕಾ ಇಲಾಖೆಯ ಸಹಕಾರದಲ್ಲಿ ಕೃಷಿಕರು ಬೆಳೆಸುವ ಟ್ರೌಟ್ ಮೀನನ್ನು ಖರೀದಿಸಿ ಮಾರಾಟ ಮಾಡುತ್ತಾರೆ. ವಿಮಾನದ ಮೂಲಕ ತರಿಸುವುದರಿಂದ ಕಡಿಮೆ ಸಮಯದಲ್ಲಿ ಈ ಮೀನುಗಳು ಘಟಕಕ್ಕೆ ತಲಪುತ್ತವೆ.

‘ರಫ್ತು ಮಾಡುವ ಗುಣಮಟ್ಟದಲ್ಲೇ ಸ್ಥಳೀಯರಿಗೂ ಮೀನುಗಳನ್ನು ಮಾರಾಟ ಮಾಡಬೇಕೆನ್ನುವ ಉದ್ದೇಶದಿಂದ ಸಂಸ್ಕರಣ ಘಟಕ ಸ್ಥಾಪಿಸಿದ್ದೇವೆ. ಮೀನುಗಾರರಿಂದ ನೇರವಾಗಿ ಖರೀದಿಸುವುದರಿಂದ ಮಾರುಕಟ್ಟೆಗಿಂತ ಶೇ20 ರಿಂದ ಶೇ30 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿದೆ' ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಕೇದಾರನಾಥ ರೆಡ್ಡಿ.

‘ಮಂಗಳೂರು, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆನ್‌ಲೈನ್ ಮೂಲಕ ಮೀನು ಮಾರಾಟ ನಡೆಸುತ್ತೇವೆ. ಭಾನುವಾರದಂದು ಜನರು ನಮ್ಮ ಘಟಕಕ್ಕೆ ಬಂದು ಮೀನಿನ ಗುಣಮಟ್ಟ ಪರಿಶೀಲಿಸಿ ಖರೀದಿಸಬಹುದು. ಎಲ್ಲಾ ದಿವಸಗಳಲ್ಲೂ ಕಾರ್ಯಾಚರಿಸುವ ಮೀನು ಮಾರುಕಟ್ಟೆಯನ್ನು ಶೀಘ್ರ ಆರಂಭಿಸಲಾಗುವುದು' ಎನ್ನುತ್ತಾರೆ ಅವರು.

ಮಾಹಿತಿಗೆ: 9341989900

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.