ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಶುಲ್ಕ ರದ್ದಾಗಲಿ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗಾಗಿ ಪಿ.ಎಲ್.ಐ. ಹಾಗೂ ಗ್ರಾಮೀಣ ಜನರಿಗಾಗಿ ಆರ್‌.ಪಿ.ಎಲ್‌.ಐ. ಜೀವ ವಿಮೆಗಳನ್ನು ಭಾರತೀಯ ಅಂಚೆ ಇಲಾಖೆ ಜಾರಿಗೆ ತಂದಿದೆ.

ಈ ವಿಮಾ ಕಂತಿನ ಪಾವತಿಯೊಂದಿಗೆ ‘ಸೇವಾಶುಲ್ಕ’ದ ಹೆಸರಿನಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಪಾಲಿಸಿದಾರರಿಗೆ ನಷ್ಟವಾಗುತ್ತಿದೆ.

ನಾನು ನೌಕರನಾಗಿದ್ದು, ಪ್ರತಿ ತಿಂಗಳು ₹ 3315 ಮೊತ್ತಕ್ಕೆ ₹ 75ನ್ನು ಸೇವಾಶುಲ್ಕವಾಗಿ ಕಟ್ಟುತ್ತಿದ್ದೇನೆ. ಪ್ರತಿ ವರ್ಷ ₹ 900ನ್ನು ಸೇವಾ ಶುಲ್ಕವಾಗಿ ಕಟ್ಟುವುದರಿಂದ ನನಗೆ ನಷ್ಟವೇ ಹೆಚ್ಚು.

ಅದೇ ರೀತಿ ಗ್ರಾಮೀಣ ಗ್ರಾಹಕರು ₹ 1000ಕ್ಕೆ ಶೇ 18 ರಷ್ಟು ಸೇವಾಶುಲ್ಕ ಪಾವತಿಸಬೇಕು. ಇದು ದುಬಾರಿಯಾಗಿದ್ದು, ನಮ್ಮ ಪಾಲಿಸಿಗಳಿಗೆ ನಾವೇ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಯಾರು ವಿಮೆ ಮಾಡಿಸಲು ಮನಸ್ಸು ಮಾಡುತ್ತಾರೆ? ಸೇವಾಶುಲ್ಕ ರದ್ದುಪಡಿಸಲು ಇಲಾಖೆಯ ಅಧಿಕಾರಿಗಳು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು.

-ರಂಗಸ್ವಾಮಿ ಎಂ., ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT