ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈವೇ ರೈಡ್‌ಗೆ ಕವಾಸಕಿ ವರ್ಸಿಸ್ ಎಕ್ಸ್ 300

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಬಿಲ್ಡ್ ಫಾರ್ ಅಡ್ವೆಂಚರ್’ ಪರಿಕಲ್ಪನೆಯಲ್ಲಿ ಇಂಡಿಯಾ ಕವಾಸಕಿ ಮೋಟಾರ್ಸ್ ಇತ್ತೀಚೆಗಷ್ಟೆ ‘ಕವಾಸಕಿ ವರ್ಸಿಸ್ ಎಕ್ಸ್ 300’ ಮೋಟಾರು ಸೈಕಲನ್ನು ಬಿಡುಗಡೆಗೊಳಿಸಿದೆ.

ನಗರದ ರಸ್ತೆ ಹಾಗೂ ಹೈವೇಗಳಲ್ಲಿನ ಸುಲಭ ಚಾಲನೆಗೆ ತಕ್ಕಂತೆ ಈ ಬೈಕ್ ಅನ್ನು ರೂಪಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ₹ 4.6 ಲಕ್ಷ ಬೆಲೆಯನ್ನು ನಿಗದಿಗೊಳಿಸಿದ್ದು, ಇದು ಕಂಪನಿಯ ಕಡಿಮೆ ಬೆಲೆಯ ಮೋಟಾರು ಸೈಕಲ್ ಎಂದು ಹೇಳಿಕೊಂಡಿದೆ.

ವರ್ಸಿಸ್ ಎಕ್ಸ್– 300ಗೆ, 300 ಸಿಸಿ ಪ್ಯಾರಲಲ್ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಇದೆ. ಇದು 11,500ಆರ್‌ಪಿಎಂನಲ್ಲಿ 40ಪಿಎಸ್ ಶಕ್ತಿ ಹಾಗೂ 10000ಆರ್‌ಪಿಎಂನಲ್ಲಿ 26ಎನ್‌ಎಂ ಪೀಕ್‌ಟಾರ್ಕ್ ಶಕ್ತಿ ಉತ್ಪಾದಿಸಲಿದೆ.

ಸಿಕ್ಸ್ ಸ್ಪೀಡ್ ಟ್ರಾನ್ಸ್‌ಮಿಷನ್ ಎಂಜಿನ್ ಇದ್ದು, ಅಸಿಸ್ಟ್ ಹಾಗೂ ಸ್ಲಿಪ್ಪರ್ ಕ್ಲಚ್ ಇರುವುದು ಹೈವೇನಲ್ಲಿ ಬೈಕ್ ಸರಾಗ ಚಲಿಸಲು ಸಹಾಯ ಮಾಡಲಿದೆ.

ಕವಾಸಕಿ ವರ್ಸಿಸ್ ಎಕ್ಸ್ 300ಗೆ ಮುಂಭಾಗದಲ್ಲಿ 41 ಎಂಎಂ ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಯುನಿ ಟ್ರಾಕ್ ಗ್ಯಾಸ್‌ ಚಾರ್ಜಡ್ ಮೋನೊ ಶಾಕ್ ಇದೆ. 19- ಇಂಚಿನ ಅಪ್‌ ಫ್ರಂಟ್ ಶಾಡ್ 100/90 ರಬ್ಬರ್ ಚಕ್ರಗಳನ್ನು ಹಾಗೂ ಹಿಂಭಾಗದಲ್ಲಿ 17-ಇಂಚಿನ ರಿಮ್ ಹೊಂದಿರುವ 130/80 ಟೈರ್ ನೀಡಲಾಗಿದೆ. ಟ್ಯೂಬ್ ಡೈಮಂಡ್ ಫ್ರೇಮ್, ವೈಡ್ ರೀಚ್ ಹ್ಯಾಂಡಲ್ ಬಾರ್‌ಗಳು, ಲೋ ಸೆಟ್‌ ಸೀಟ್ ಏಡ್ ಕೂಡ ಇವೆ.

175 ಕೆ.ಜಿ ತೂಕ ಹೊಂದಿದ್ದು, 17 ಲೀಟರ್ ಇಂಧನ ಸಾಮರ್ಥ್ಯ ನೀಡಿರುವುದು ವಿಶೇಷ. ಇದು ಲಾಂಗ್ ಡ್ರೈವ್‌ಗೂ ಸಹಕಾರಿಯಾಗಲಿದೆ.

ಬೈಕ್‌ನಲ್ಲಿ, ಶಾಖ ನಿರ್ವಹಣಾ ತಂತ್ರಜ್ಞಾನವನ್ನು ಹೊಸದಾಗಿ ಅಳವಡಿಸಲಾಗಿದೆ. ಇದು ಗಾಳಿಯಾಡಲು (ಏರ್‌ಫ್ಲೋ) ಅನುಕೂಲ ಮಾಡಿಕೊಡಲಿದೆ. ಜೊತೆಗೆ ಎಂಜಿನ್ ಬಿಸಿಯಾಗದಂತೆ ತಡೆಯಲಿದೆ. ಟ್ಯಾಂಕ್ ಹಾಗೂ ಫ್ರೇಮ್ ಅನ್ನೂ ತಣ್ಣಗೆ ಇರಿಸುತ್ತದೆ.

*


ಮಾರುತಿ ಸೆಲೆರಿಯೊ ಎಕ್ಸ್‌ನಿಂದ ಎಂಟು ಆವೃತ್ತಿ
ಎಂಟು ಆವೃತ್ತಿಗಳಲ್ಲಿ ಮಾರುತಿ ಸೆಲೆರಿಯೊ ಎಕ್ಸ್‌ ಬಿಡುಗಡೆಗೊಂಡಿದೆ. Vxi, Vxi AMT, Vxi (O), Vxi (O) AMT, Zxi, Zxi AMT, Zxi (Opt), and Zxi (O) AMT ಆ ಆವೃತ್ತಿಗಳು.

ಬೋಲ್ಡ್, ಸ್ಪೋರ್ಟಿ ಹಾಗೂ ಟ್ರೆಂಡಿ ಲುಕ್‌ಗಳೊಂದಿಗೆ ಈ ಕಾರನ್ನು ಪರಿಚಯಿಸಲಾಗಿದ್ದು, ಎಲ್ಲಾ ಆವೃತ್ತಿಗಳಲ್ಲೂ ಆಟೊ ಗಿಯರ್ ಶಿಫ್ಟ್ (ಎಎಂಟಿ) ಆಯ್ಕೆ ಇರುವುದು ವಿಶೇಷ.

‘ಭಾರತದ ಕಾರು ಮಾರುಕಟ್ಟೆಯಲ್ಲಿ ಸ್ಪರ್ಧೆಯಲ್ಲಿರುವ ಕಾಂಪಾಕ್ಟ್ ಕಾರುಗಳ ವಿಭಾಗದಲ್ಲಿ ಸೆಲೆರಿಯೊ ತನ್ನದೇ ಒಂದು ನೆಲೆಯನ್ನು ಸೃಷ್ಟಿಸಿಕೊಂಡಿದೆ. ಅದೇ ನಿಟ್ಟಿನಲ್ಲಿ ‘ಎಕ್ಸ್‌’ ಶ್ರೇಣಿಯಲ್ಲಿ ಕಾರನ್ನು ಇನ್ನಷ್ಟು ಸ್ಟೈಲಿಶ್ ಆಗಿ ತರಲಾಗಿದೆ. ಯುವಜನತೆಯ ಅಭಿರುಚಿಗೆ ತಕ್ಕಂತೆ ಕಾರಿನ ಶೈಲಿಯೂ ಇದೆ’ ಎಂದರು ಮಾರುತಿ ಸುಜುಕಿ ಇಂಡಿಯಾದ ಮಾರಾಟ ವಿಭಾಗದ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಸ್. ಕಾಲ್ಸಿ.

ಗ್ರಿಲ್‌ಗೆ ಹೊಸದಾದ ಎಕ್ಸ್ ಥೀಮ್ ಗ್ರಾಫಿಕ್ ವಿನ್ಯಾಸವನ್ನು ನೀಡಲಾಗಿದೆ. ರಿಯರ್ ಬಂಪರ್ ಹಾಗೂ ಸ್ಕಿಡ್ ಪ್ಲೇಟ್‌ಗಳು, ಗ್ಲಾಸ್‌ ಬ್ಲಾಕ್, ಕ್ಲಾಡ್, ರೂಫ್‌ಗಳು ಹೊಸ ಶೈಲಿಗಳನ್ನು ಹೊಂದಿರಲಿವೆ.

ಪ್ಯಾಪ್ರಿಕಾ ಆರೆಂಜ್ ಬಣ್ಣವನ್ನು ಸಿಗ್ನೇಚರ್ ಬಣ್ಣವಾಗಿಸಿದೆ. ಆರ್ಕ್‌ಟಿಕ್ ವೈಟ್, ಗ್ಲಿಸನಿಂಗ್ ಗ್ರೇ, ಕೆಫೇನ್ ಬ್ರೌನ್, ಟಾರ್ಕ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ವೈಟ್ ಅಕ್ಸೆಂಟ್‌ಗಳೊಂದಿಗೆ ಕ್ಯಾಬಿನ್‌ ಪೂರ್ಣ ಕಪ್ಪು ಇಂಟೀರಿಯರ್ ಹೊಂದಿದೆ. ಕಪ್ಪು ಸೀಟ್ ಟ್ರಿಮ್‌ಗಳಿಗೆ ಆರೆಂಜ್ ಅಕ್ಸೆಂಟ್‌ಗಳಿಂದ ಲುಕ್ ನೀಡಲಾಗಿದೆ. ಡ್ರೈವರ್ ಸೀಟ್‌ನಲ್ಲಿ ಏರ್‌ಬ್ಯಾಗ್ ಹಾಗೂ ಸೀಟ್‌ಬೆಲ್ಟ್ ಇದ್ದು, ಪ್ಯಾಸೆಂಜರ್ ಏರ್‌ ಬ್ಯಾಗ್ ಹಾಗೂ ಎಬಿಎಸ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.

1.0 ಲೀಟರ್ 3-ಸಿಲಿಂಡರ್ ಕೆ10ಬಿ ಪೆಟ್ರೋಲ್ ಎಂಜಿನ್ ಇದ್ದು, 6000ಆರ್‌ಪಿಎಂನಲ್ಲಿ 67 ಬಿಎಚ್‌ಪಿ ಶಕ್ತಿಯನ್ನು ಹಾಗೂ 3500ಆರ್‌ಪಿಎಂನಲ್ಲಿ 90 ಎನ್ಎಂ ಪೀಕ್‌ಟಾರ್ಕ್ ಶಕ್ತಿ ಯನ್ನು ಉತ್ಪಾದಿಸಲಿದೆ. ₹4.57 ಲಕ್ಷದಿಂದ ಆರಂಭಗೊಂಡು ₹5.42 ಲಕ್ಷದವರೆಗೂ ಬೆಲೆ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT