ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ್ಗೇರಿಯಾದ ಬೀದಿ ಲೈಬ್ರರಿ!

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್... ಮನರಂಜನೆಗೆ ಏನಿಲ್ಲ ಆಯ್ಕೆ? ಬೆರಳಿಗಂಟಿದ ಗ್ಯಾಜೆಟ್‌ಗಳಲ್ಲೇ ಮಾಹಿತಿಯ ಮಹಾಪೂರ. ಈ ಅಭ್ಯಾಸ ಪುಸ್ತಕದತ್ತ ಲಕ್ಷ್ಯ ಕಡಿಮೆ ಮಾಡಿರುವುದೂ ನಿಜ. ಆದರೆ ಯುವಜನರನ್ನು ಪುಸ್ತಕ ಓದುವ ಕಡೆ ಸೆಳೆಯುವ ಅಗತ್ಯತೆಯನ್ನು ಮನಗಂಡು ಬಲ್ಗೇರಿಯಾದಲ್ಲಿ ಹೊಸದೊಂದು ಲೈಬ್ರರಿಯನ್ನು ತೆರೆಯಲಾಗಿದೆ.

ಈ ಲೈಬ್ರರಿಗೆ ಹೋಗಲು ಅನುಮತಿ ಬೇಕಿಲ್ಲ. ಯಾರು ಬೇಕಾದರೂ ಹೋಗಬಹುದು, ತಮ್ಮಿಷ್ಟದ ಪುಸ್ತಕವನ್ನು ತೆಗೆದುಕೊಂಡು ಓದಬಹುದು.

ಲೈಬ್ರರಿ ಇರುವುದು ಬೀದಿಯಲ್ಲಿ. ಇದಕ್ಕೆ ಬಾಗಿಲೂ ಇಲ್ಲ. ಇದನ್ನು ನೋಡಿಕೊಳ್ಳಲು ಯಾರೂ ಇಲ್ಲ. ಇದರ ಹೆಸರು ‘ರಪಾನಾ’. ‘ಸ್ಟ್ರೀಟ್ ಲೈಬ್ರರಿ – ಓಪನ್ ಲೈಬ್ರರಿ’ ಪರಿಕಲ್ಪನೆಯಲ್ಲಿ ಇದನ್ನು ರೂಪಿಸಲಾಗಿದೆ.

ಎಲ್ಲರೂ ಪುಸ್ತಕ ಓದಬೇಕು, ಜೊತೆಗೆ ಓದಲು ಅನುಕೂಲವಾಗಬೇಕು ಎಂಬ ಕಾರಣಕ್ಕೆ ನಿಲ್ದಾಣದ ಬಳಿ ಇದನ್ನು ರೂಪಿಸಲಾಗಿದೆ. ವಾಹನಕ್ಕೆ ಕಾಯುವ ಅವಧಿಯಲ್ಲಿ ಈ ಲೈಬ್ರರಿಗೆ ಭೇಟಿ ಕೊಟ್ಟು ಸಿಕ್ಕ ಸಮಯದಲ್ಲೇ ಪುಸ್ತಕ ಓದಬಹುದು.

ಸುಲಭವಾಗಿ ಪುಸ್ತಕ ಓದಲು ಅದಕ್ಕೆ ತಕ್ಕಂತೆ ವಿನ್ಯಾಸವನ್ನೂ ಮಾಡಲಾಗಿದೆ. ಅಲ್ಲಿನ ಒಂದಿಷ್ಟು ಯುವ ವಿನ್ಯಾಸಕರು ಸೇರಿ ಈ ಲೈಬ್ರರಿಯನ್ನು ರೂಪಿಸಿದ್ದಾರೆ. ಪ್ರಕೃತಿಯಿಂದ ಪ್ರೇರೇಪಣೆಗೊಂಡು ಇದನ್ನು ವಿನ್ಯಾಸಗೊಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಲೈಬ್ರರಿ ಶಂಕು ಆಕಾರದಲ್ಲಿದೆ. ಪ್ಯಾರಾಮೆಟ್ರಿಕ್ ಡಿಸೈನ್ ಟೂಲ್ಸ್ ರೈನೊಸೆರೊಸ್ 3ಡಿ ಹಾಗೂ ಗ್ರಾಸ್ ಹೋಪರ್ ತಂತ್ರಜ್ಞಾನವನ್ನು ಬಳಸಿಕೊಂಡು ವಿನ್ಯಾಸಗೊಳಿಸಲಾಗಿದೆ.

ಆರಾಮಾಗಿ ಕುಳಿತುಕೊಳ್ಳಲು ರಿಲ್ಯಾಕ್ಸ್ ಝೋನ್ ಕೂಡ ಇದೆ. 1500 ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ಇತ್ತೀಚೆಗೆ ಈ ಲೈಬ್ರರಿ ತೆರೆದಿದ್ದು, ಪುಸ್ತಕ ಓದುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಇದನ್ನು ರೂಪಿಸಿದ ತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT