7

ಸೂಚ್ಯಂಕ 205 ಅಂಶ ಇಳಿಕೆ

Published:
Updated:
ಸೂಚ್ಯಂಕ 205 ಅಂಶ ಇಳಿಕೆ

ಮುಂಬೈ: ಆರ್‌ಬಿಐ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದರಿಂದ ಷೇರುಪೇಟೆಯಲ್ಲಿ ಸೂಚ್ಯಂಕಗಳು ಇಳಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 205 ಅಂಶ ಇಳಿಕೆ ಕಂಡು, 32,597 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 74 ಅಂಶ ಇಳಿಕೆಯಾಗಿ 10,044 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬ್ಯಾಂಕಿಂಗ್‌ ವಲಯದ ಸೂಚ್ಯಂಕ ಶೇ 1.23 ರಷ್ಟು ಇಳಿಕೆ ಕಂಡವು. ಎಸ್‌ಬಿಐ, ಆ್ಯಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಯೆಸ್‌ ಬ್ಯಾಂಕ್‌ ಶೇ 2.27ರವರೆಗೂ ಇಳಿಕೆಯಾಗಿವೆ.

ಸನ್‌ ಫಾರ್ಮಾ ಶೇ 2.31 ರಷ್ಟು ಗರಿಷ್ಠ ಕುಸಿತ ಕಂಡಿತು. ನಂತರ ಬಜಾಜ್‌ ಆಟೊ ಶೇ 1.65 ರಷ್ಟು ಇಳಿಕೆಯಾಗಿದೆ.

ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,470 ಕೋಟಿ ಮೌಲ್ಯದ ಷೇರುಗಳನ್ನು ಮಾರಿದ್ದರೆ, ದೇಶಿ ಹೂಡಿಕೆದಾರರು ₹ 1,074 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿಯೂ ಇಳಿಮುಖ ವಹಿವಾಟು ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry