6

ಎಸ್‌. ಐ ಮೇಲೆ ಗುಂಡು

Published:
Updated:

ಲಖನೌ : ಇಲ್ಲಿನ ಕಾನ್ಪುರ ಜಿಲ್ಲೆಯ ಪಂಕಿ ಪಟ್ಟಣದಲ್ಲಿ ಅಪರಿಚಿತನೊಬ್ಬ ತಪಾಸಣೆ ನಡೆಸಲು ತಡೆದ ವೇಳೆ ಗುಂಡು ಹಾರಿಸಿದ್ದು, ಸಬ್‌ ಇನ್‌ಸ್ಪೆಕ್ಟರ್‌ ಗಾಯಗೊಂಡಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್‌ ಅನುರಾಗ್‌ ಸಿಂಗ್‌ ಹಾಗೂ ಕಾನ್‌ಸ್ಟೆಬಲ್‌ ಗಿರಿಜೇಶ್‌ ಗಸ್ತು ತಿರುಗುತ್ತಿದ್ದರು. ಆಗ ಸಮೀಪದ ರಾಮಲೀಲಾ ಮೈದಾನದ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿದ್ದುದನ್ನು ಗಮನಿಸಿದ ಅವರು, ತಪಾಸಣೆಗಾಗಿ ಆತನನ್ನು ತಡೆಯಲು ಮುಂದಾದರು. ಆಗ ಆತ ಅನುರಾಗ್‌ ಸಿಂಗ್‌ ಅವರತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹುಲ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಗುಂಡು ಎಸ್‌ಐ ಅವರ ಮೈ ಉಜ್ಜಿಕೊಂಡು ಹೋಗಿದ್ದು, ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry