ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರದಲ್ಲೇ ಮುದ್ರಿಸಿದ ಇಂಗ್ಲಿಷ್‌ ಪುಸ್ತಕಕ್ಕೆ ಅಂತರರಾಷ್ಟ್ರೀಯ ಬೆಲೆ’

ಗ್ರಂಥಾಲಯ ನಿರ್ದೇಶಕರಿಂದ ತಪ್ಪು ಮಾಹಿತಿ: ಪ್ರಕಾಶಕರ ಸಂಘ
Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲೇ ಮುದ್ರಿಸಿದ ಇಂಗ್ಲಿಷ್‌ ಪುಸ್ತಕಕ್ಕೆ ವಿದೇಶಿ ಪುಸ್ತಕಗಳೆಂದು ಬೆಲೆ ನಿಗದಿ ಮಾಡಲಾಗುತ್ತಿದೆ. 250 ರಿಂದ 300 ಪುಟಗಳ ಪುಸ್ತಕಕ್ಕೆ ₹2,000 ಕ್ಕೂ ಹೆಚ್ಚು ಬೆಲೆ ನೀಡಿ ಗ್ರಂಥಾಲಯ ಇಲಾಖೆ ಖರೀದಿ ಮಾಡುತ್ತಿದೆ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಆರೋಪಿಸಿದೆ.

ಈ ಹಿಂದೆ ಶ್ರೀಕಂಠ ಕೂಡಿಗೆ ಅಧ್ಯಕ್ಷತೆಯ ರಾಜ್ಯ ಪುಸ್ತಕ ಆಯ್ಕೆ ಸಮಿತಿ ಖರೀದಿಗಾಗಿ ಆಯ್ಕೆ ಮಾಡಿದ ಇಂಗ್ಲಿಷ್‌  ಪುಸ್ತಕಗಳು ಬಹಳಷ್ಟು ಪುಸ್ತಕಗಳ ಬೆಲೆ ₹500 ರಿಂದ ₹2000 ದವರೆಗೆ ಇದ್ದವು ಎಂದು ಸಂಘ ತಿಳಿಸಿದೆ.

ನಾರಾಯಣ ದಾಸ್‌ ಅವರ ದಲಿತ್‌ ಲಿಟರೇಚರ್‌ 328 ಪುಟ ₹1800, ಸೌಂದರ ಪಾಂಡಿಯನ್‌ ಅವರ ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ 302 ಪುಟ ₹2000, ಅನಿಲ್‌ ದತ್ತ ಮಿಶ್ರಾ ಅವರ ಮಹಾತ್ಮಗಾಂಧಿ ಸ್ಪೀಕ್ಸ್‌  423 ಪುಟ ₹1250, ಕೆ.ಕೆ.ಸುನಾಲಿನಿ ಅವರ ಇಂಗ್ಲಿಷ್‌ ಲಾಂಗ್ವೇಜ್‌ ಟೀಚಿಂಗ್‌ ಇನ್‌ ಇಂಡಿಯಾ 263 ಪುಟಗಳು ₹1100 ಈ ರೀತಿ ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದು ಸಂಘ ತಿಳಿಸಿದೆ.

ನಿರ್ದೇಶಕರಿಂದ ತಪ್ಪು ಮಾಹಿತಿ: ‘ಇಂಗ್ಲಿಷ್‌ ಮತ್ತು ಇತರ ಭಾಷೆಗಳ ಖರೀದಿಗೆ ಬೆಲೆ ನಿಗದಿ ಮಾಡಬೇಕು ಎಂದು ಗ್ರಂಥಾಲಯ ಇಲಾಖೆಗೆ ಸೆಪ್ಟೆಂಬರ್‌ನಲ್ಲೇ ಪ್ರಸ್ತಾವ ಸಲ್ಲಿಸಿದ್ದೆವು’ ಎಂದು  ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ಸೃಷ್ಟಿ ನಾಗೇಶ್‌ ತಿಳಿಸಿದ್ದಾರೆ.

‘ಇಂಗ್ಲಿಷ್‌ ಪುಸ್ತಕಗಳ ಖರೀದಿ ಬೆಲೆ ನಿಗದಿಗೆ ಪ್ರಕಾಶಕರಿಂದ ಮನವಿ ಬಂದರೆ ಸರ್ಕಾರಕ್ಕೆ ನೀಡುತ್ತೇನೆ. ಇಲ್ಲಿಯವರೆಗೆ ಪ್ರಸ್ತಾವ ಬಂದಿಲ್ಲ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ ಹೊಸಮನಿ ತಪ್ಪು ಮಾಹಿತಿ ನೀಡಿದ್ದಾರೆ’ ಎಂದರು.

ಕನ್ನಡ ಪುಸ್ತಕಗಳ ಖರೀದಿಗೆ ಅನುಸರಿಸುವ ಮಾನದಂಡವನ್ನೇ ಇಂಗ್ಲಿಷ್‌ ಪುಸ್ತಕ ಆಯ್ಕೆ ಮಾಡುವಾಗಲೂ ಅನುಸರಿಸಬೇಕು ಎಂಬ ಪ್ರಸ್ತಾವಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳ ಅಧ್ಯಕ್ಷರು ಸಹಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT