7

ಮುಸ್ಲಿಂ ಧರ್ಮದ ಅಸ್ತಿತ್ವದ ಕುರಿತು ಮಾತನಾಡಲಿ

Published:
Updated:
ಮುಸ್ಲಿಂ ಧರ್ಮದ ಅಸ್ತಿತ್ವದ ಕುರಿತು ಮಾತನಾಡಲಿ

ಉಡುಪಿ:‘ಶ್ರೀರಾಮನ ಅಸ್ತಿತ್ವದ ಬಗ್ಗೆ ಮಾತನಾಡುವ ಹಿರಿಯ ವಕೀಲ ಸಿ.ಎಸ್. ದ್ವಾರಕಾನಾಥ್ ಅವರಿಗೆ ಮುಸ್ಲಿಂ ಧರ್ಮದ ಅಸ್ತಿತ್ವದ ಬಗ್ಗೆ ಮಾತನಾಡುವುದಕ್ಕೆ ಧೈರ್ಯವಿದೆಯೇ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸವಾಲು ಹಾಕಿದ್ದಾರೆ.

ದ್ವಾರಕಾನಾಥ್‌ ಅವರು ಮಂಗಳವಾರ ಮಂಗಳೂರಿನಲ್ಲಿ ಶ್ರೀರಾಮನ ಅಸ್ತಿತ್ವಕ್ಕೆ ಪುರಾವೆಗಳು ಇಲ್ಲ ಎಂದು ನೀಡಿದ್ದ ಹೇಳಿಕೆಗೆ ಶ್ರೀಗಳು ಇಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದರು.

‘ಇದು ಅವರ ವೈಯಕ್ತಿಕ ನಂಬಕೆಯಾಗಿರಬಹುದು. ಆದರೆ ಅದನ್ನು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ. ಶ್ರೀರಾಮನ ಬಗ್ಗೆ ಜನರಿಗೆ ಅಚಲ ವಿಶ್ವಾಸ ಹಾಗೂ ಧೃಢ ನಂಬಿಕೆ ಇದೆ. ಜನರ ನಂಬಿಕೆ ಅಲುಗಾಡಿಸುವ ಪ್ರಯತ್ನಕ್ಕೆ ಕೈಹಾಕುವುದು ಸರಿಯಲ್ಲ’ ಎಂದು ಸ್ವಾಮೀಜಿ ಹೇಳಿದರು.

‘ಹಿಂದೂಗಳು ಎಲ್ಲವನ್ನೂ ಸಹಿಸುತ್ತಾರೆ ಎಂಬ ಕಾರಣಕ್ಕೆ ಈತರಹ ಹೇಳಿಕೆ ನೀಡುವುದು ಸರಿಯಲ್ಲ. ಇದೇ ಹೇಳಿಕೆಯನ್ನು ಮುಸ್ಲಿಂ ಧರ್ಮ

ದ ಬಗ್ಗೆ ಮಾಡಲು ಅವರಿಗೆ ಸಾಧ್ಯವಿದೆಯೇ’ ಎಂದು ಅವರು ಕೇಳಿದರು.

ದ್ವಾರಕಾನಾಥ್‌ ವಿರುದ್ಧ ದೂರು

ರಾಮನ ಅಸ್ತಿತ್ವ ಕುರಿತು ಸಂದೇಹ ವ್ಯಕ್ತಪಡಿಸಿ ಹೇಳಿಕ ನೀಡಿರುವ ದ್ವಾರಕಾನಾಥ್ ವಿರುದ್ಧ ಬಂಟ್ವಾಳ ನಗರ ಠಾಣೆಗೆ  ಗಣೇಶ್‌ ಶೆಟ್ಟಿ ಎಂಬವರು ದೂರು ನೀಡಿದ್ದಾರೆ.

ದ್ವಾರಕಾನಾಥ್‌ ಹೇಳಿಕೆಯಿಂದ ಮತೀಯ ಭಾವನೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ದೂರು ದಾಖಲು

ರಾಮನ ಅಸ್ತಿತ್ವ ಕುರಿತು ಸಂದೇಹ ವ್ಯಕ್ತಪಡಿಸಿ ಹೇಳಿಕ ನೀಡಿರುವ ದ್ವಾರಕಾನಾಥ್ ವಿರುದ್ಧ ಬಂಟ್ವಾಳ ನಗರ ಠಾಣೆಗೆ  ಗಣೇಶ್‌ ಶೆಟ್ಟಿ ಎಂಬವರು ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry