ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಸಚಿವ ರಮೇಶ್‌ಕುಮಾರ್ ತರಾಟೆ

Last Updated 6 ಡಿಸೆಂಬರ್ 2017, 20:18 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವಲ್ಲಿ ತಾರತಮ್ಯ ವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ
ಯಲ್ಲಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರು  ಲೋಕೋಪಯೋಗಿ ಇಲಾಖೆ ಅಧಿಕಾರಿ
ಗಳನ್ನು ಸಾರ್ವಜನಿಕವಾಗಿ ‘ರಾಸ್ಕಲ್ಸ್‌, ಯೂಸ್‌ಲೆಸ್‌ ಫೆಲೋಸ್‌’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಬುಧವಾರ ಗ್ರಾಮಕ್ಕೆ ಬಂದ ಸಚಿವರ ಬಳಿ ದೂರು ಹೇಳಿಕೊಂಡ ಗ್ರಾಮಸ್ಥರು, ‘ಪಿಡಬ್ಲ್ಯೂಡಿ ಅಧಿಕಾರಿಗಳು ವಿಶೇಷ ಘಟಕ ಯೋಜನೆಯಡಿ ದಲಿತ ಕಾಲೊನಿಗಳಲ್ಲಿ ಮಾತ್ರ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿದ್ದಾರೆ. ದಲಿತ ಕಾಲೊನಿಗಳು ಒಳಗೊಂಡಂತೆ ಇಡೀ ಗ್ರಾಮಕ್ಕೆ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದರೂ ಕಿರಿಯ ಎಂಜಿನಿಯರ್‌ ವೆಂಕಟೇಶ್‌ ಒಪ್ಪುತ್ತಿಲ್ಲ’ ಎಂದರು.

ಇದರಿಂದ ಆಕ್ರೋಶಗೊಂಡ ಸಚಿವರು, ‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ತೀರ್ಮಾನ ತೆಗೆದುಕೊಳ್ಳಲು ನೀವು ಯಾರು. ಜನ
ರನ್ನು ದಾರಿ ತಪ್ಪಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಅಧಿಕ ಪ್ರಸಂಗತನ ಬಿಟ್ಟು ಹೇಳಿದಷ್ಟು ಮಾಡಿ. ಇಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಜಾಗ ಖಾಲಿ ಮಾಡಿ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಜೆ.ಇ, ಗುಮಾಸ್ತರು ಈ ರಾಜ್ಯ ನಡೆಸುತ್ತಿದ್ದಾರೆ. ಅಧಿಕಾರಿಗಳದೇ ರಾಜ್ಯಭಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಅಧಿಕಾರಿ
ಗಳ ಮನೆಗಳಲ್ಲಿ ಕಸ ಗುಡಿಸುತ್ತೇವೆಇಡೀ ಗ್ರಾಮಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಬೇಕೆಂದು ಸಾವಿರ ಸಲ ಹೇಳಿದ್ದೇನೆ.
ಆದರೂ ತಲೆಹರಟೆ ಮಾಡುತ್ತೀರಿ. ನೀವು ಹೇಳಿದ ಮಾತು ಕೇಳಲು ನಾನು ಜನಪ್ರತಿನಿಧಿಯಾಗಿಲ್ಲ’ ಎಂದು ರೇಗಿ ಅಧಿಕಾರಿಗಳ ಮೇಲೆ ನೀರಿನ ಬಾಟಲಿ ಎಸೆಯಲು ಮುಂದಾದರು. ಆಗ ಕಾರ್ಯಕರ್ತರು ಸಚಿವರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT