3

ದೇಶದ ಅಖಂಡತೆ ಒಡೆಯುತ್ತಿರುವುದು ಸಲ್ಲ: ಸವದಿ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ರಬಕವಿ ಬನಹಟ್ಟಿ: ‘ಧರ್ಮದ ತಳಹದಿಯ ಮೇಲೆ ನಿಂತಿರುವ ಭಾರತವನ್ನು ಕೆಲವರು ಅಧಿಕಾರದ ಆಸೆಗಾಗಿ ಬಸವಣ್ಣನ ಹೆಸರು ಹೇಳುತ್ತಾ, ನಮ್ಮಲ್ಲಿಯ ಅಖಂಡತೆಯನ್ನು ಒಡೆಯುತ್ತಿರುವುದು ಸರಿಯಲ್ಲ’ ಎಂದು ಮಾಜಿ ಶಾಸಕ ಸಿದ್ದು ಸವದಿ ಹೇಳಿದರು.

ಸ್ಥಳೀಯ ಹಿರೇಮಠದಲ್ಲಿ ಲಿಂ. ಗುರುಶಾಂತವೀರ ಶಿವಾಚಾರ್ಯರ 27ನೇ ಚಿರಲಿಂಗಾಂಗ ಸಾಮರಸ್ಯ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವನಚ ಮತ್ತು ಬೆಳಕು ಚಿಂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಾಡಿಗೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಆಧ್ಯಾತ್ಮಿಕ ಪ್ರವಚನಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪ್ರವಚನಗಳು ನಮಗೆ ನ್ಯಾಯ, ನೀತಿ, ಸತ್ಯ ಹಾಗೂ ಧರ್ಮದಿಂದ ನಡೆಯುವ ಮಾರ್ಗವನ್ನು ತಿಳಿಸುತ್ತವೆ’ ಎಂದರು.

ಹಿಪ್ಪರಗಿಯ ಶಿವರುದ್ರ ಶರಣರು ಮಾತನಾಡಿ, ‘ಗುರು ಮತ್ತು ಭಗವಂತನ ಮೇಲೆ ವಿಶ್ವಾಸವಿಟ್ಟು ಅವರ ಸೇವೆ ಮಾಡಬೇಕು. ಪ್ರಾಮಾಣಿಕ ಸೇವೆಯಿಂದ ಭಗವಂತನ ಸಾಮಿಪ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸೇವೆಯಿಂದ ಜ್ಞಾನವನ್ನು ಪಡೆಯಬಹುದು’ ಎಂದು ತಿಳಿಸಿದರು.

ವೇದಿಕೆಯ ಮೇಲೆ ಜಮಖಂಡಿಯ ಮುತ್ತಿನ ಕಂತಿನ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಮಂಗಳೂರಿನ ಶ್ರೀಶೈಲ ಸ್ವಾಮೀಜಿ, ಸಾಹಿತಿ ಸಿದ್ಧರಾಜ ಪೂಜಾರಿ, ಕುಲಹಳ್ಳಿಯ ವೀರಭದ್ರಯ್ಯ ಸ್ವಾಮೀಜಿ, ಧಾರವಾಡದ ಮುರಘಾ ಮಠದ ಯೋಗಾನಂದ ಸ್ವಾಮೀಜಿ ಮತ್ತು ಹಿರೇಮಠದ ಶರಣಬಸವ ಶಿವಾಚಾರ್ಯರು ಇದ್ದರು.

ಅಶೋಕ ಬೀಳಗಿ ಪ್ರಾರ್ಥಿಸಿದರು. ಶಿವಾನಂದ ಹಿರೇಮಠ ಸ್ವಾಗತಿಸಿದರು. ವಿಶ್ವಜ ಕಾಡದೇವರ ನಿರೂಪಿಸಿದರು. ಮಾಧ್ವಾನಂಗ ಗುಟ್ಲಿ ವಂದಿಸಿದರು. ಶರಣಬಸವ ಶಿವಾಚಾರ್ಯರು ಮಂಗಲ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಧಬಾಡಿ, ಶಿವಾನಂದ ಬಾಗಲಕೋಟಮಠ, ಕಲ್ಲಪ್ಪ ಪತ್ತಾರ, ಬಸವರಾಜ ಮೋಪಗಾರ, ಶ್ರೀಶೈಲ ಮಠಪತಿ, ಶೇಖರ ಬಂದವ್ವಗೋಳ, ವೀರೂಪಾಕ್ಷಪ್ಪ ಕೊಕಟನೂರ, ನಂದು ಕುಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry