ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 18 ಕೋಟಿ ಅನುದಾನದಲ್ಲಿ ವಾರ್ಡ್‌ಗಳ ಅಭಿವೃದ್ಧಿ

ಪುರಸಭೆ ಆಡಳಿತ ಕಚೇರಿಯಲ್ಲಿ ನಿರ್ಗಮಿತ ಪುರಸಭೆ ಅಧ್ಯಕ್ಷರ ಹೇಳಿಕೆ
Last Updated 7 ಡಿಸೆಂಬರ್ 2017, 5:48 IST
ಅಕ್ಷರ ಗಾತ್ರ

ದೇವನಹಳ್ಳಿ: ಪುರಸಭೆ ಅಧ್ಯಕ್ಷರಾಗಿ ಆಡಳಿತ ನಡೆಸಿದ 14 ತಿಂಗಳ ಆಡಳಿತಾವಧಿಯಲ್ಲಿ ₹ 18 ಕೋಟಿಗಿಂತ ಹೆಚ್ಚು ಅನುದಾನದಲ್ಲಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ನಿರ್ಗಮಿತ ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪುರಸಭೆ ಆಡಳಿತ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ದೇವನಹಳ್ಳಿ ಬೈಪಾಸ್ ರಸ್ತೆ ಪ್ರವೇಶದಿಂದ ರಾಣಿ ವೃತ್ತದ ವರೆಗೆ ಒಟ್ಟು 2.75 ಕಿ.ಮೀ.ಉದ್ದ ರಸ್ತೆಯಲ್ಲಿ ಮಿಡಿಯಮ್ ದೀಪ ಅಳವಡಿಸಲಾಗಿದೆ. ಪುರಸಭೆಯ ಎಲ್ಲಾ ವಾರ್ಡ್‌ಗಳಲ್ಲಿ ಪ್ರಖರ ಬೆಳಕು ಇರುವ 800 ದೀಪಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಎರಡು ಓವರ್ ಹೆಡ್ ಟ್ಯಾಂಕ್ ದುರಸ್ತಿ ಮಾಡಲಾಗಿದೆ.

ಪುರಸಭೆ ಮುಂಭಾಗ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ₹ 1.5 ಕೋಟಿ ವೆಚ್ಚ. ನಗರದ ವ್ಯಾಪ್ತಿಯಲ್ಲಿ 9.6 ಕಿ.ಮೀ.ರಸ್ತೆಗೆ ಹೊಸದಾಗಿ ಡಾಂಬರೀಕರಣ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.

ಹೊಸ ಬಸ್ ನಿಲ್ದಾಣದಲ್ಲಿರುವ ಪುರಸಭೆ ವಾಣಿಜ್ಯ ಕಟ್ಟಡ ಆಧುನೀಕರಣಕ್ಕೆ ₹ 40 ಲಕ್ಷ ವೆಚ್ಚ. ನಗರೋತ್ಥಾನ 2ನೇ ಹಂತದ ಯೋಜನೆಯಡಿ 1,400 ಮೀಟರ್ ಮುಖ್ಯ ಚರಂಡಿಗಳನ್ನು ನಿರ್ಮಿಸಲಾಗಿದೆ. 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ₹ 1.15 ಕೋಟಿ ಮೊತ್ತದ ಅನುದಾನಕ್ಕೆ ಟೆಂಡರ್ ಪ್ರಗತಿಯಲ್ಲಿದೆ ಎಂದರು.

ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ₹ 6.25 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ದೊರಕಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಈ ಅನುದಾನವನ್ನು ಬೆಟ್ಟಕೋಟೆ ಕೆರೆಯಲ್ಲಿ ಕೊಳವೆ ಬಾವಿ ಕೊರೆಯಿಸಿ ಪೈಪ್ ಲೈನ್ ಮೂಲಕ ನಗರಕ್ಕೆ ಕುಡಿಯುವ ನೀರು ಪೂರೈಕೆ ಮತ್ತು ಚಿಕ್ಕ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ನನ್ನ ಆಡಳಿತಾವಧಿಯಲ್ಲಿ ನಡೆದ ಪ್ರತಿಯೊಂದು ಕಾಮಗಾರಿಗೆ ಸದಸ್ಯರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್, ಸದಸ್ಯರಾದ ಜಿ.ಎ.ರವಿಂದ್ರ, ಎನ್.ರಘು, ಶಶಿ
ಕುಮಾರ್, ಶಾರದಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT