7

ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಸಿಬ್ಬಂದಿ ಎಸಿಬಿ ಬಲೆಗೆ

Published:
Updated:

ಶಹಾಪುರ: ಜಮೀನು ಸರ್ವೆಯ ವರದಿ ನೀಡಲು ಖಾಸಗಿ ಹೋಟೆಲ್‌ವೊಂದರಲ್ಲಿ ಬುಧವಾರ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆಯ ಸರ್ವೇಯರ ದತ್ತುಕುಮಾರ ಅವರನ್ನು ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

ತಾಲ್ಲೂಕಿನ ಖಾನಾಪುರ ಗ್ರಾಮದ ರೈತ ಮರಳಪ್ಪ ತನ್ನ ಜಮೀನು ಸರ್ವೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಸರ್ವೆ ವರದಿ ನೀಡಲು ಇನ್ನೂ ₹5,000 ನೀಡು ವಂತೆ ಒತ್ತಾಯಿಸಿ ದ್ದರು. ಇದರಿಂದ ರೋಸಿ ಹೋದ ರೈತ ಮರಳಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಎಸಿಬಿ ಡಿವೈಎಸ್ಪಿ ವಿರೇಶ ಕರಡಿಗುಡ್ಡ ನೇತೃತ್ವದಲ್ಲಿ ದಾಳಿ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry