7

ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ

Published:
Updated:

ವಿಜಯಪುರ: ಬ್ಯಾಂಕ್, ಖಜಾನೆಯಿಂದ ವಿವಿಧ ರೀತಿಯ ನಿವೃತ್ತ ಪಿಂಚಣಿ ಪಡೆಯುವ ಪಿಂಚಣಿದಾರರು, ಜೀವಿತ ಪ್ರಮಾಣ ಪತ್ರ ಸಲ್ಲಿಸುವಂತೆ ಜಿಲ್ಲಾ ಖಜಾನೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ನಿವೃತ್ತ ಪಿಂಚಣಿ, ಪಿಂಚಣಿ, ಪುರಸಭೆಯ ಪಿಂಚಣಿ, ಸ್ವಾತಂತ್ರ್ಯ ಯೋಧರ ಹಾಗೂ ಕಲಾವಿದರ ಪಿಂಚಣಿಯನ್ನು ಪಡೆಯುತ್ತಿರುವ ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳ ಪಿಂಚಣಿಯನ್ನು ಪಡೆಯುವಾಗ ಸೇವಾ ಪಿಂಚಣಿದಾರರು ಕಡ್ಡಾಯವಾಗಿ ಜೀವಿತ ಪ್ರಮಾಣ ಪತ್ರ ಹಾಗೂ ಕುಟುಂಬ ಪಿಂಚಣಿದಾರರು ಪುನರ್ ವಿವಾಹ ಆಗದೆ ಇರುವ ಬಗ್ಗೆ ನೋರಿ ಮ್ಯಾರೇಜ್ ಸರ್ಟಿಫಿಕೇಟನ್ನು ತಾವು ಪಿಂಚಣಿ ಪಡೆಯುತ್ತಿರುವ ಸಂಬಂಧಿಸಿದ ಬ್ಯಾಂಕ್, ಖಜಾನೆಗೆ ಸಲ್ಲಿಸಲು ಸೂಚಿಸಲಾಗಿದೆ.

ಸಲ್ಲಿಸದಿದ್ದಲ್ಲಿ ಡಿಸೆಂಬರ್‌ನಿಂದ ಅಂತಹ ಪಿಂಚಣಿದಾರರ ಪಿಂಚಣಿ ತಡೆ ಹಿಡಿಯಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry