7
ಉಡುಪಿ: ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ ಅಭಿಮತ

ಐಎಎಸ್‌, ಕೆಎಎಸ್‌ ಅಧಿಕಾರಿಗಳಿಗೆ ಒಂದೇ ಸಮವಸ್ತ್ರ

Published:
Updated:
ಐಎಎಸ್‌, ಕೆಎಎಸ್‌ ಅಧಿಕಾರಿಗಳಿಗೆ ಒಂದೇ ಸಮವಸ್ತ್ರ

ಉಡುಪಿ: ‘ಇಂದು ಆಡಳಿತ ವ್ಯವಸ್ಥೆಯಲ್ಲಿರೋ ಐಎಎಸ್‌, ಕೆಎಎಸ್ ಅಧಿಕಾರಿಗಳಿಗೆ ಒಂದೇ ರೀತಿಯಾದ ಸಮವಸ್ತ್ರ ಬರುವಂತಾಗ ಬೇಕು’ ಎಂದು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಸಂಸ್ಥಾಪಕ ಉಪೇಂದ್ರ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸೇವೆಗಾಗಿ ಇರುವ ಸರ್ಕಾರಿ ಅಧಿಕಾರಿಗಳನ್ನು ಎಷ್ಟು ಜನ ನೋಡಿದ್ದೀರಿ. ಅಧಿಕಾರಿಗಳು ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು ಜನರ ಸಮಸ್ಯೆ ಕೇಳುವುದಲ್ಲ. ಜನರ ನಡುವೆ ಬಂದು ಸೇವೆ ಮಾಡುವಂತಾಗಬೇಕು. ಆಡಳಿತ ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಲು ಅಧಿಕಾರಿಗಳು ಜನರೊಂದಿಗೆ ಒಂದಾ ಗಬೇಕು ಎಂದು ಹೇಳಿದರು.

ನಮ್ಮಲ್ಲಿರುವ ಸುಂದರ ಕಲ್ಪನೆಗಳು ಹಾಳುಗುತ್ತಿವೆ. ಕೊಳೆಚೆ ಗುಂಡಿಯಲ್ಲಿ ಕೂತು ಕಿತ್ತೊ ಹೋಗಿರುವ ಸೇವೆಯಲ್ಲಿ ಬಡವ ನೀ ಮಡಗಿದರಿಗಿರು ಎನ್ನುವ ಹಂತಕ್ಕೆ ತಲುಪಿದ್ದೇವೆ. ತಪ್ಪು ನಡೆದಿತ್ತ ಇದೆ ಎಂದು ಗೊತ್ತಿದು ಜನರು ಮಾಧ್ಯಮಗಳ ಮುಂದೆ ಕೂಳಿತುಕೊಳ್ಳುವ ಮೂಕ ಪ್ರೇಕ್ಷರಾಗಿದ್ದಾರೆ. ನಿಮ್ಮ ಒಂದು ಸಣ್ಣ ನಿರ್ಧಾರದಿಂದ ದೇಶದಲ್ಲಿ ದೊಡ್ಡ ಬದಲಾವಣೆ ತರ‌ಬಹುದು ಎಂದರು.

ಚುನಾವಣೆ ಬಂದಾಗ ಮಾತ್ರ ಜನರ ಮನೆಗಳಿಗೆ ಪಾದಯಾತ್ರೆ ಮಾಡುವ ರಾಜಕಾರಣ ಬದಲಾಗಬೇಕು. ಪ್ರಜೆಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಷ್ಟು ಸಮಯವನ್ನು ಜನಪ್ರತಿನಿಧಿಗಳು ಮೀಸಲಿಡಬೇಕು. ಪ್ರತಿನಿತ್ಯ ನೂತನ ತಂತ್ರಾಂಶವನ್ನು ಬಳಸಿಕೊಂಡು ಜನರ ಅಗತ್ಯತೆ ತಿಳಿಯೋ ಪ್ರಯತ್ನ ನಡೆದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಗೆ ಅರ್ಥ ಬರುತ್ತದೆ ಎಂದರು.

ಆದರೆ, ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಇತಂಹ ಪದ್ಧತಿ ಬದಲಾಗಬೇಕು. ಪಕ್ಷ ಕಟ್ಟಲು ಹಣ ಬೇಕೆ ಬೇಕು ಎನ್ನುವ ಮನ:ಸ್ಥಿತಿ ಇದೆ. ಇತ್ತೀಚಿನ ದಿನದಲ್ಲಿ ಒಂದು ಪಕ್ಷ ಕಟ್ಟ ಬೇಕಾದರೆ ಕೋಟಿಗಟ್ಟಲೆ ಹಣ ವ್ಯಯಿಸಬೇಕಾಗದ ಪರಿಸ್ಥಿತಿ ಇದೆ. ರಾಜ್ಯದಿಂದ 224 ವಿಧಾನ ಸಭಾ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ನಿಲ್ಲಿಸುವಾಗ ಅವರಿಂದ ಹಣ ಪಡೆದರೆ, ಆತ ಗೆದ್ದ ಮೇಲೆ ಸುಮ್ಮನಿರುತ್ತಾನಾ, ಹಾಕಿದ ಬಂಡವಾಳಕ್ಕೆ ನಿವಾಳ ಲಾಭವನ್ನು ಪಡೆಯಲು ಹಾತೋರೆ ಯುತ್ತಾನೆ ಎಂದು ಅಭಿಪ್ರಾ ಯಪಟ್ಟರು.

ಆದರೆ, ದುಡ್ಡು ಯಾಕೆ ಬೇಕು? ಜಾತಿ ಯಾರಿಗೆ ಬೇಕು? ಧರ್ಮ ಯಾರಿಗೆ ಬೇಕು? ಅದು ಅವರ ಮನಸ್ಸಿನಲ್ಲಿ ಇದ್ದರೆ ಸಾಕು. ಜನರಿಗೆ ಬೇಕಿರುವುದು ಉಚಿತ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಮಾತ್ರ. ಆದರೆ, ಇಂದು ಸಮಾಜದಲ್ಲಿ ಜಾತಿಯೆಂಬ ವಿಷದ ವಿಜ ಬಿತ್ತಿ ವೋಟ್ ಬ್ಯಾಂಕ್‌ ರಾಜಕಾರಣ ನಡೆಸಲಾಗುತ್ತಿದೆ ಎಂದು ತಿಳಿಸಿದರು

ರಾಜಕಾರಣಿಯಾಗಬೇಕಾದ ಮೊದ ಲು ಅರ್ಹತೆ ಮುಖ್ಯವಾಗಿರುತ್ತದೆ ವಿನಃ ದುಡ್ಡು, ಜಾತಿ ಬಲದಿಂದಲ್ಲ. ಜನರ ಸಮಸ್ಯೆಗಳ ಬಗ್ಗೆ ಅರಿವು ಹಾಗೂ ಅದನ್ನು ಹೇಗೆ ಪರಿಹಾರಿಸ ಬೇಕೆಂಬ ಅರಿವು ಬೇಕು. ನಮ್ಮಗೆ ಜನ ನಾಯಕರೂ ಬೇಡ, ಜನ ಸೇವಕರು ಬೇಡ. ನಮ್ಮವರ ಕೆಲಸ ಮಾಡುವ ಕಾರ್ಮಿಕ ಬೇಕು ಅಂತಹವರಿಗೆ ಕೆಪಿಜೆಪಿ ಪಕ್ಷದ ಕೈ ಪಕ್ಷದ ಬಾಗಿಲು ತೆರೆದಿರುತ್ತದೆ. ಈ ಕಾರ್ಮಿಕರು ತಪ್ಪು ಮಾಡಿದರೆ ಅದರ ಸಂಪೂರ್ಣ ಜವಾಬ್ದಾರಿನ್ನು ತೆಗೆದುಕೊಳ್ಳು ನಾನು ಬದ್ಧನಾಗಿರುತ್ತೇನೆ ಎಂದರು.

***

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ರಾಜ್ಯದಿಂದ 50,000 ಅರ್ಜಿಗಳ ಬಂದಿದ್ದು, ಅದರಲ್ಲಿ ಸುಮಾರು 30,000 ಅರ್ಜಿಗಳು ನೋಂದಣಿ ಆಗಿದೆ.

ಉಪೇಂದ್ರ,ಕೆಪಿಜೆಪಿ ಸಂಸ್ಥಾಪಕ,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry