7
ಹಂಗಿನ ಬದುಕಿನಿಂದ ಹೊರಬಂದು ಹಕ್ಕಿನ ಬದುಕು ನಡೆಸುತ್ತಿರುವ ಬಡವರು; ಎಚ್.ಕೆ. ಪಾಟೀಲ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Published:
Updated:

ಮುಳಗುಂದ: ಸಮೀಪದ ಬೆಳಧಡಿ ಗ್ರಾಮದಲ್ಲಿ ₹ 1 ಕೋಟಿ ಅನುದಾನದಲ್ಲಿ ಗೊಂದಾವಲಿ ಮಹಾರಾಜರ ಸಮುದಾಯ ಭವನ, ಸಿಸಿ ರಸ್ತೆ, ಜ್ಞಾನಜ್ಯೋತಿ ಮಹಿಳಾ ಸ್ವಸಹಾಯ ಸಂಘದ ಸಮುದಾಯ ಭವನ, ಬೀರಲಿಂಗೇಶ್ವ ಸಮುದಾಯ ಭವನ, ಶಿರಸಿ ಮಾರಿಕಾಂಬಾ ಸಮುದಾಯ ಭವನ, ದುರ್ಗಾದೇವಿ ಸಮುದಾಯ ಭವನ, ಕಬಲಾಯತಕಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ, ಬಾಂದರಾ ನಿರ್ಮಾಣ ಹಾಗೂ ನಭಾಪುರ ಗ್ರಾಮದಲ್ಲಿ ₹ 80 ಲಕ್ಷ ಮೊತ್ತದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನರ ಬದುಕಿನ ಗುಣಮಟ್ಟದ ಸುಧಾರಿಸುವಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಜನರು ಹಂಗಿನ ಬದುಕಿನಿಂದ ಹೊರಬಂದು ಹಕ್ಕಿನ ಬದುಕು ನಡೆಸುವಂತಾಗಿದೆ. ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಇದೇ ವೇಳೆ ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್ ಹಾಗೂ ಸ್ಟವ್ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ನದಾಫ, ತಾಲ್ಲೂಕು ಪಂಚಾಯಿತಿ ಇಒ ಎಚ್.ಎಸ್. ಜನಗಿ, ಭೂಸೇನಾ ನಿಗಮದ ಎಂಜನಿಯರ್ ಶ್ರೀನಿವಾಸ್, ಮಾಳೋದಕರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಧರ್ಮಪ್ಪ ಲಮಾಣಿ, ಸದಸ್ಯರಾದ ಬಸವರಾಜ ಕುರ್ತಕೋಟಿ, ಶಂಕ್ರಪ್ಪ ಲಮಾಣಿ, ಕಸ್ತೂರೆವ್ವ ಹರೇಮಠ, ಪದ್ಮಾವತಿ ಲಮಾಣಿ, ಶಂಭುಲಿಂಗಯ್ಯ ಕಲ್ಮಠ, ಬಸವರಾಜ ಸೂಡಿ, ವೆಂಕಣ್ಣರಾವ್ ಇನಾಂದಾರ, ದತ್ತಣ್ಣ ಇನಾಂದಾರ, ಕೃಷ್ಣಾರಾವ್ ಇನಾಂದಾರ, ಶಂಕ್ರಪ್ಪ ಮಜ್ಜಿಗುಡ್ಡ, ನೀಲಕಂಠಯ್ಯ ಹಿರೇಮಠ, ಶಂಕ್ರಪ್ಪ ಉಮಚಗಿ, ಮುತ್ತಪ್ಪ ಇನಾಮತಿ, ಬ್ರಹ್ಮಾನಂದ ಜಡಿ, ಉಲ್ಲಾಸರಾವ್ ಕುಲಕರ್ಣಿ, ಠಾಕೂರಸಿಂಗ್ ಲಮಾಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry