ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ರಂದು ತಾಲ್ಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನ

Last Updated 7 ಡಿಸೆಂಬರ್ 2017, 10:08 IST
ಅಕ್ಷರ ಗಾತ್ರ

ಬಂಟ್ವಾಳ: ‘ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಇದೇ 10ರಂದು ತಾಲ್ಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನವು ಬಿ.ಸಿ.ರೋಡಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಯಲಿದೆ’ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದ್ದಾರೆ.

ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,‘ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಹಿರಿಯ ಸಾಹಿತಿ ಮಲಾರು ಜಯರಾಮ ರೈ ಅಧ್ಯಕ್ಷತೆಯಲ್ಲಿ ಅಂದು ದಿನವಿಡೀ ಸಮ್ಮೇಳನ ನಡೆಯಲಿದೆ’ ಎಂದರು.

ಮೆರವಣಿಗೆ:  ಅಂದು ಬೆಳಿಗ್ಗೆ 9ಗಂಟೆಗೆ ಬಿ.ಸಿ.ರೋಡು ಮುಖ್ಯವೃತ್ತದಿಂದ ತುಳುನಾಡಿನ ಸಾಂಸ್ಕೃತಿಕ ಸೊಬಗನ್ನು ಪ್ರತಿಬಿಂಬಿಸುವ ಕಲಾಪ್ರದರ್ಶನಗಳೊಂದಿಗೆ ತುಳುವೆರೆ ದಿಬ್ಬಣ ಸಭಾಂಗಣಕ್ಕೆ ಸಾಗಿ ಬರಲಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮೆರವಣಿಗೆ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಮ್ಮೇಳನ ಉದ್ಘಾಟಿಸುವರು.

ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ವಸ್ತು ಪ್ರದರ್ಶನ ಉದ್ಘಾಟಿಸುವರು. ಆಹಾರ ಸಚಿವ ಯು.ಟಿ. ಖಾದರ್, ವಿಧಾನಪರಿಷತ್ತು ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರಮುಖರಾದ ಬಿ.ಎಚ್. ಖಾದರ್, ಚಂದ್ರಹಾಸ ಕಕರ್ೇರ, ಪಿ. ರಾಮಕೃಷ್ಣ ಆಳ್ವ, ಸದಾಶಿವ ಬಂಗೇರ ಭಾಗವಹಿಸುವರು.

ಅಂದು ಬೆಳಿಗ್ಗೆ 11 ಗಂಟೆಗೆ ತುಳುನಾಡ ಐಸಿರ , 11.30ಕ್ಕೆ ಚಾವಡಿ ಪಟ್ಟಾಂಗ , ಮಧ್ಯಾಹ್ನ 12.30ಕ್ಕೆ ಪಾರಿ-ಪಾಡ್ದನ, ಉರಲ್-ಬೀರ, ಸಂದಿ ಹೇಳುವುದು. ಮಧ್ಯಾಹ್ನ 1.30ಕ್ಕೆ ಹಳೆಯ ತುಳು ಹಾಡುಗಳ ಗಾಯನ, ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ಚಾವಡಿ ಪಟ್ಟಾಂಗ - ಸಾಗೋಳಿದ ಎರ್ತೆ ಜಪ್ಪೆಲ್ ಮಾತುಕತೆ, ಸಂಜೆ 4 ಗಂಟೆಗೆ ತುಳು ರಂಗ್ರಂಗಿತೊ ಲೇಸ್, ಸಂಜೆ 4.30ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ 6.30ಕ್ಕೆ ತುಳು ಜಾನಪದ ನಲಿಕೆಲು, ರಾತ್ರಿ 7 ರಿಂದ 'ತುಳು ಯಕ್ಷ ಹಾಸ್ಯ ವೈಭವ' ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದರು.

‘ತುಳು ಗಾದೆ, ಎದುರುಕತೆ, ಅಜ್ಜಿಕತೆ ಬರೆಯುವುದು, ತುಳು ಲಿಪಿಯಲ್ಲಿ ತುಳುವ ವೀರರ ಹೆಸರು ಬರೆಯುವುದು, ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಸೈಕಲ್ ಟಯರ್, ಕಾರ್ ಕಂಬುಲ, ಪಾಲೆ ಬಂಡಿ, ಗೋಲಿಗೊಬ್ಬು, ಜಿಬಿಲಿ, ಕೆರೆ ದಂಡೆ, ಡೊಂಕಾಟ, ಕಲ್ಲಾಟ, ಉಪ್ಪುಮುಡಿ, ಲಗೋರಿ, ಗೋಣಿ ಚೀರವು, ಹಗ್ಗಜಗ್ಗಾಟ, ಮುಟ್ಟಾಲೆ ಪಾಡಿ, ಹಿರಿಯ ನಾಗರಿಕರಿಗೆ ವೇಗದ ನಡಿಗೆ ಸ್ಪಧರ್ೆ ನಡೆಯಲಿದೆ. ಬಟ್ಟಿ, ಕುಡುಪು, ಮುಟ್ಟಾಳೆ, ಬೀಡಿದ ಸೂಪು, ಪಜೆ, ಮಣ್ಣ್ದ ಬಾಜನ, ಕೈಲ್, ತಡ್ಪೆ, ಕುರುವೆ, ಮೈಪುಸೂಡಿ, ಕರ್ಬದ ಕೊಟ್ಯ, ಕೈಮಗ್ಗ, ಗಾಣದ ಕೊಟ್ಯ, ಮರತ್ತ ಕೊಟ್ಯ, ಚಮ್ಮಾರಿಕೆ, ಮೂರ್ತೆಗಾರಿಕೆ, ಬೆಲ್ಲ ತಯಾರಿಕೆಗಳ ಪ್ರಾತ್ಯಕ್ಷಿಕೆ, ಪುಸ್ತಕ, ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಸಂಜೆ 5 ಗಂಟೆಗೆ ದುನಿಪು ತುಳು ಪದೊ ರಂಗಿತೊ, ಸಂಜೆ 5.30ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ’ ಎಂದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎಂ. ಕುಲಾಲ್, ಪ್ರಮುಖರಾದ ಗೋಪಾಲ ಅಂಚನ್, ಸೇಸಪ್ಪ ಮಾಸ್ಟರ್, ಮೋಹನ್ ದಾಸ್ ಕೊಟ್ಟಾರಿ, ಮುರಳೀಧರ ಶೆಟ್ಟಿ, ಗಂಗಾಧರ ಭಟ್, ಸುಭಾಶ್ಚಂದ್ರ ಜೈನ್, ನಾರಾಯಣ ಸಿ. ಪೆರ್ನೆ, ಸದಾಶಿವ ಪುತ್ರನ್, ಚಂದ್ರಶೇಖರ್ ಗಟ್ಟಿ ಸಜಿಪ, ಮಧುಸೂದನ್ ಶೆಣೈ, ಕೆ. ಮೋಹನ್ ರಾವ್, ಎಚ್ಕೆ ನಯನಾಡು ಮತ್ತಿತರರು ಇದ್ದರು.

***

ಸನ್ಮಾನಿತರು

ಗಿರಿರಾಜ ವಗ್ಗ (ರಂಗ ಕರ್ಮಿ), ಕಾಂತಪ್ಪ ಶೆಟ್ಟಿ ಅಗರಿ (ಪುಲ ಮರ್ದಿ), ಬಿ. ಆರ್. ಕುಲಾಲ್ ಬಿ.ಸಿ.ರೋಡು (ರಂಗ ಭೂಮಿ), ವಾಸು ಪಂಡಿತ ಸರಪಾಡಿ (ಪುಲ ಮರ್ದಿ), ಅಣ್ಣು ಪೂಜಾರಿ ಅಮ್ಟಾಡಿ (ಕಂಬುಲ), ಗೌರಿ ಪಾಲ್ತಾಜೆ (ಪದೆತಿ), ಎಸ್. ರಹೀಮಾನ್ ಸಾಹೇಬ್ ಇರ್ವತ್ತೂರು (ಉರಗ ಸಂರಕ್ಷಣೆ), ಮೀನಾಕ್ಷಿ ಆಚಾರ್ಯ ಬಿ.ಸಿ.ರೋಡು (ಪುಲ ಮರ್ದಿ), ವಿಶ್ವನಾಥ ಶೆಟ್ಟಿ ಸೋರ್ನಾಡು (ಯಕ್ಷಗಾನ), ನಾರಾಯಣ ದಾಸ್ ಕಕ್ಯಪದವು (ಧರ್ಮ ಕಜ್ಜ), ಅಂತೋನಿ ಪಿಂಟೋ ಪೆನರ್ೆ (ಕಂಡ ಸಾಗೊಳಿ) ಶಶಿ ಬಂಡಿಮಾರ್ (ತುಳು ಪತ್ರಿಕೆ), ಶೇಖರ ಪಂಬದ ಸಜಿಪ (ದೈವಾರಾಧನೆ) ಇವರನ್ನು ಸನ್ಮಾನಿಸಲಾಗುವುದು ಎಂದರು.

ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮತ್ತು ಭೂತರಾಧನೆ ದೇಜಪ್ಪ ಬಾಚಕೆರೆ ಅವರಿಗೆ ತುಳು ಸಿರಿ ಪ್ರಶಸ್ತಿ ಪ್ರದಾನ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT