7

ಬ್ಯಾಡಗಿ-ಬೆಂಗಳೂರು ಬಸ್‌ಗೆ ಚಾಲನೆ

Published:
Updated:

ಬ್ಯಾಡಗಿ: ತಡೆರಹಿತ ಬ್ಯಾಡಗಿ–ಬೆಂಗಳೂರು ಬಸ್‌ಗೆ ಶಾಸಕ ಬಸವರಾಜ ಶಿವಣ್ಣನವರ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಇತ್ತೀಚೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬ್ಯಾಡಗಿಯಿಂದ ರಾತ್ರಿ 9.15ಕ್ಕೆ ಬಿಡುವ ಬಸ್‌ ಬಿಸಲಹಳ್ಳಿ, ರಟ್ಟಿಹಳ್ಳಿ, ತುಮ್ಮಿಕಟ್ಟಿ, ಹರಿಹರ ಮಾರ್ಗವಾಗಿ ಬೆಂಗಳೂರಿಗೆ ಮರುದಿನ ಬೆಳಿಗ್ಗೆ 6ಕ್ಕೆ ತಲುಪಲಿದೆ. ಅದೇ ದಿನ ರಾತ್ರಿ 9ಕ್ಕೆ ಬೆಂಗಳೂರಿನಿಂದ ಹೊರಡುವ ಮತ್ತೆ ಅದೇ ಮಾರ್ಗವಾಗಿ ಬ್ಯಾಡಗಿಗೆ ಬೆಳಿಗ್ಗೆ 6ಕ್ಕೆ ತಲುಪಲಿದೆ ಎಂದರು.

ಗ್ರಾಮೀಣರಿಗೆ ಅನುಕೂಲವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ’ ಎಂದು ಘಟಕದ ವ್ಯವಸ್ಥಾಪಕ ಮಂಜುನಾಥ ಕಡ್ಲಿಕೊಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry