7

ಬಾಬ್ರಿ ಮಸೀದಿ ಪುನಃ ನಿರ್ಮಾಣಕ್ಕೆ ಒತ್ತಾಯ

Published:
Updated:

ಆಳಂದ: ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ ಗತಿಸಿದ ಹಿನ್ನೆಲೆಯಲ್ಲಿ ಬುಧವಾರ ಆಲ್ ಇಂಡಿಯಾ ತಂಜೀಮ್ ಎ ಇನ್ಸಾಫ್ ಸಂಘಟನೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಬಾಬ್ರಿ ಮಸೀದಿ ಪುನಃ ನಿರ್ಮಾಣಕ್ಕೆ ಒತ್ತಾಯಿಸಲಾಯಿತು.

ಮುಖಂಡ ಮೌಲಾ ಮುಲ್ಲಾ ಮಾತನಾಡಿ, ‘ಜಾತ್ಯತೀತ ರಾಷ್ಟ್ರದಲ್ಲಿ ಬಾಬ್ರಿ ಮಸೀದಿಯು ಧ್ವಂಸ ಘಟನೆಯು ಒಂದು ಕರಾಳ ದಿನವಾಗಿದೆ. ಕೋಮುವಾದಿ ಶಕ್ತಿಗಳು ಇಂದು ಸಹ ನಮ್ಮ ದೇಶದ ಐತಿಹಾಸಿಕ, ಧಾರ್ಮಿಕ ಸ್ಮಾರಕಗಳ ಬಗೆಗೆ ಅನಗತ್ಯ ವಿವಾದ ಸೃಷ್ಟಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಸಲಾಂ ಸಗರಿ, ಖಲೀಲ ಅನ್ಸಾರಿ ಮಾತನಾಡಿ, ‘ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಬ್ರಾನ್ ಆಯೋಗದ ಶಿಫಾರಸ್ಸಿನಂತೆ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಮತ್ತೆ ಅದೇ ಸ್ಥಳದಲ್ಲಿ ಕೇಂದ್ರ ಸರ್ಕಾರ ಬಾಬ್ರಿ ಮಸೀದಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಅಹ್ಮದಲಿ ಚುಲಬುಲ್, ಅಫ್ಜಲ ಅನ್ಸಾರಿ, ಫಿರಾಸತ್ ಅನ್ಸಾರಿ, ಸತ್ತಾರ ಮುರಮಕರ, ಸುಲೇಮಾನ ಮುಗುಟ್, ಪಾಶಾ ಗುತ್ತೇದಾರ, ಯೂನಿಸ್ ಜರ್ಧಿ, ಖಾದರ್ ಮುರಮಕರ, ಮದಸ್ಸರಾ ಮುಲ್ಲಾ ಇದ್ದರು. ಉಪ ತಹಶೀಲ್ದಾರ್ ಭೀಮಾಶಂಕರ ಕುದರಿ ಮನವಿ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry