ಬುಧವಾರ, ಮಾರ್ಚ್ 3, 2021
25 °C

ಉದಯದಲ್ಲಿ ಪ್ರೇಮರಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದಯದಲ್ಲಿ ಪ್ರೇಮರಾಗ

ಒಂದು ದಶಕದ ಬಳಿಕ ನಟಿ ಪ್ರೇಮಾ ಕನ್ನಡ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಉದಯ ಸಿಂಗರ್ ಜೂನಿಯರ್ಸ್‌ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

ಕ್ರೇಜಿ ಸ್ಟಾರ್‌ ರವಿಚಂದ್ರನ್ ಅವರ ಜೊತೆಗೆ ‘ಎಲ್ಲೋ ಅದು ಎಲ್ಲೋ...’ ಹಾಡಿಗೆ ಹೆಜ್ಜೆ ಕೂಡ ಹಾಕಿದರು. 17 ವರ್ಷದ ಹಿಂದೆ ‘ಕನಸುಗಾರ’ ಚಿತ್ರದ ಮೂಲಕ ಈ ಜೋಡಿ ನೋಡುಗರಿಗೆ ಮೋಡಿ ಮಾಡಿತ್ತು.

‘ನನ್ನ ಮತ್ತು ಪ್ರೇಮಾ ಅವರ ಜೋಡಿಯ ಗೀತೆಗಳು ಯಾವಾಗಲೂ ಅದೃಷ್ಟ ತಂದುಕೊಟ್ಟಿವೆ. ಅವರ ಜೊತೆಗೆ ಅಭಿನಯಿಸಿದ ಚಿತ್ರ ಕೂಡ ಸೂಪರ್‍ ಹಿಟ್ ಆಗಿದೆ’ ಎಂದು ಖುಷಿ ಹಂಚಿಕೊಂಡರು ರವಿಚಂದ್ರನ್.

ಪ್ರೇಮಾ ಅವರು ಎಲ್ಲ ಸ್ಪರ್ಧಿಗಳಿಗೆ ಧನಾತ್ಮಕ ಪ್ರತಿಕ್ರಿಯೆ ನೀಡಿ ಶುಭ ಕೋರಿದರು. ಅಲ್ಲದೆ ‘ಬಾಳ ಬಂಗಾರ ನೀನು...’ ಹಾಡು ಹಾಡಿ ರಂಜಿಸಿದರು. ಈ ವಿಶೇಷ ಸಂಚಿಕೆಯು ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.