ಬುಧವಾರ, ಫೆಬ್ರವರಿ 24, 2021
24 °C

ಚಂದದ ಉಡುಗೆ ಬಿಂಕದ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದದ ಉಡುಗೆ ಬಿಂಕದ ನಡಿಗೆ

ಚೆಂದದ ಬೆಡಗಿಯರ ಸೌಂದರ್ಯವನ್ನು ಇಂಪಾದ ಸಂಗೀತ ಮತ್ತು ಸುಂದರ ಉಡುಗೆ ಹೆಚ್ಚಿಸಿತ್ತು. ಮನಸೆಳೆವ ನೋಟದೊಂದಿಗೆ ಅವರಿಟ್ಟ ಬೆಕ್ಕಿನ ಹೆಜ್ಜೆಗೆ ನೆರೆದವರ ಮನಸ್ಸು ಕುಣಿಯುತ್ತಿತ್ತು.

ಇದು ಒರಾಯನ್‌ ಫ್ಯಾಷನ್‌ ವೀಕ್‌ನಲ್ಲಿ ನಡೆದ ಫ್ಯಾಷನ್‌ ಶೋ. 5ನೇ ಆವೃತ್ತಿಯ ಈ ಫ್ಯಾಷನ್‌ ವೀಕ್‌ ಇತ್ತೀಚೆಗಷ್ಟೇ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಒರಾಯನ್‌ ಮಾಲ್‌ನ ಲೇಕ್‌ಸೈಡ್‌ನಲ್ಲಿ ಹಾಗೂ ಬಾಣಸವಾಡಿಯ ಒರಾಯನ್‌ ಈಸ್ಟ್‌ ಮಾಲ್‌ನಲ್ಲಿ ನಡೆಯಿತು.

ಲೇಕ್‌ಸೈಡ್‌ನಲ್ಲಿ ನಡೆದ ಫ್ಯಾಷನ್‌ ಶೋನಲ್ಲಿ ವಿವಿಧ ಬ್ರಾಂಡ್‌ಗಳ ಬಟ್ಟೆಗಳನ್ನು ತೊಟ್ಟು ಲಲನಾಮಣಿಯರು ಬೆಕ್ಕಿನಹೆಜ್ಜೆ ಇಟ್ಟರು. ಶೋನ ಸಂಯೋಜನೆ ಪ್ರಸಾದ್‌ ಬಿದಪ್ಪ ಅವರಿದಾಗಿತ್ತು. ಒರಾಯನ್‌ನಲ್ಲಿರುವ ಎಲ್ಲಾ ಬ್ರಾಂಡ್‌ಗಳ ವಿನ್ಯಾಸವನ್ನು ಜನರ ಮುಂದಿಡಲಾಯಿತು.–ನಟಿ ಅದಿತಿರಾವ್ ಹೈದರಿ

ಮೊದಲ ದಿನ ಹರ್ಷಿಕಾ ಪೂಣಚ್ಚ, ಎರಡನೇ ದಿನ ನಿಧಿ ಸುಬ್ಬಯ್ಯ ಶೋ ಸ್ಟಾಪರ್‌ ಆಗಿ ಗಮನ ಸೆಳೆದರು. ಬಾಣಸವಾಡಿಯಲ್ಲಿ ನಡೆದ ಕೊನೆಯ ದಿನದ ಶೋನಲ್ಲಿ ಬಾಲಿವುಡ್‌ನ ನಟಿ ಅದಿತಿರಾವ್ ಹೈದರಿ ಭಾಗವಹಿಸಿ ಬೆಳದಿಂಗಳ ಸಂಜೆಗೆ ಬಣ್ಣದ ಮೆರುಗು ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.