ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಮಣಿಶಂಕರ್ ಅಯ್ಯರ್ ಅಮಾನತು

ನವದೆಹಲಿ: ‘ಪ್ರಧಾನಿ ಮೋದಿ ನೀಚ ಸ್ವಭಾವದ ಮನುಷ್ಯ. ಸಭ್ಯತೆಯೇ ಇಲ್ಲದವರು’ ಎಂದು ಟೀಕೆ ಮಾಡಿದ್ದ ಮಣಿಶಂಕರ್ ಅಯ್ಯರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗುರುವಾರ ಅಮಾನತುಗೊಳಿಸಲಾಗಿದೆ.
ಮಣಿಶಂಕರ್ ಅಯ್ಯರ್ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಇದು ಕಾಂಗ್ರೆಸ್‌ನವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದರು.
#Congress suspends #ManiShankarAiyar from primary membership of party over his 'neech aadmi' jibe against prime minister
— Press Trust of India (@PTI_News) December 7, 2017
ಪ್ರಧಾನಿ ಮೋದಿ ಅವರನ್ನು 'ನೀಚ’ ಎಂದು ಟೀಕಿಸಿದ್ದ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡುವ ಜತೆಗೆ ಕಾಂಗ್ರೆಸ್ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
‘ಮೋದಿ ನೀಚ ಜಾತಿಯವ ಮತ್ತು ನೀಚ ಎಂದಿದ್ದಾರೆ. ಇದು ಗುಜರಾತಿಗೆ ಮಾಡಿದ ಅವಮಾನವಲ್ಲವೇ. ಇದಕ್ಕೆ ಗುಜರಾತಿಗಳು ಮತದಾನದಲ್ಲಿ ಉತ್ತರಿಸಲಿದ್ದಾರೆ’ ಎಂದು ಮೋದಿ ತಿರುಗೇಟು ನೀಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.