ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ಒದಗಿಸಿ!

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಮಿಷನ್, ವಸತಿ ಯೋಜನೆಗಳ ಪ್ರಗತಿ ದಾಖಲೀಕರಣ, ಪಡಿತರ ಚೀಟಿ ಕಾರ್ಯ, ಬಾಪೂಜಿ ಸೇವಾ ಕೇಂದ್ರದ ಮೂಲಕ ಒಂದೇ ಸೂರಿನಡಿ ನೀಡುವ ಹಲವು ಸೇವೆ- ಈ ಎಲ್ಲದರ ಡಾಟಾ ಎಂಟ್ರಿ, ಆಧಾರ್ ಮಾಹಿತಿ ಪರಿಷ್ಕರಣೆ... ಹೀಗೆ ಗ್ರಾಮ ಪಂಚಾಯಿತಿಗಳಲ್ಲಿ ಈಗ ಕೆಲಸಗಳು ಹೆಚ್ಚಾಗಿವೆ. ಹೀಗಾಗಿ, ಅಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು ಸರ್ಕಾರ ಸೃಷ್ಟಿ ಮಾಡಿದ್ದು ಸ್ವಾಗತಾರ್ಹ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ದಶಕದಿಂದ ದುಡಿಯುತ್ತಿರುವ ಕಂಪ್ಯೂಟರ್‌ ಆಪರೇಟರ್‌ಗಳನ್ನು ಕೈಬಿಟ್ಟು ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಅನ್ಯಾಯ.

ಹಾಲಿ ಇರುವ ಕಂಪ್ಯೂಟರ್ ಆಪರೇಟರ್‌ಗಳು 2005ರಿಂದ ಈವರೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ‘ಇ– ಆಡಳಿತ’ ಜಾರಿಯಾದ ನಂತರ ಗ್ರಾಮ ಪಂಚಾ­ಯಿತಿ­ಗಳಲ್ಲಿ ‘ಪಂಚತಂತ್ರ’ ತಂತ್ರಾಂಶದ ಬಳಕೆ­ ಸರ್ವವ್ಯಾಪಿಯಾಯಿತು. ಇದಾದ ನಂತರ ಎಲ್ಲ ಪಂಚಾಯಿತಿಗಳಲ್ಲಿ, ಕಂಪ್ಯೂಟರ್‌ ಆಪರೇಟರ್‌ಗಳನ್ನು ‘ಡಾಟಾ ಎಂಟ್ರಿ ಆಪರೇಟರ್’ ಎನ್ನುವ ಸ್ವತಂತ್ರ ಹುದ್ದೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯಿತಿಯ ಶೇಕಡ 90ರಷ್ಟು ಕೆಲಸಗಳು ಕಂಪ್ಯೂಟರನ್ನು ಆಧರಿಸಿವೆ. ಹೀಗಿದ್ದರೂ ಪಂಚಾಯತ್‌ ರಾಜ್ ಇಲಾಖೆ ಏಕೆ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡುತ್ತಿಲ್ಲ ಎಂದು ಇಷ್ಟು ದಿನ ಪ್ರಶ್ನಿಸಲಾಗುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಆದರೆ, ಇದ್ದವರನ್ನು ಬಿಟ್ಟು, ಹೊಸ ಅರ್ಜಿಗಳನ್ನು ಕರೆದಿರುವುದರಿಂದ ಇಷ್ಟು ವರ್ಷ ದುಡಿದ ಆಪರೇಟರುಗಳು ಕಂಗಾಲಾಗಿದ್ದಾರೆ.

ರಾಜ್ಯದ ಸಾವಿರಾರು ಆಪರೇಟರ್‌ಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈಗಿರುವ ಆಪರೇಟರುಗಳಿಗೆ ಅನುಮೋದನೆ ನೀಡಿ, ಖಾಲಿ ಇರುವ ಸ್ಥಳಗಳಲ್ಲಿ ಮಾತ್ರ ಹೊಸ ಅಭ್ಯರ್ಥಿಗಳ ನೇಮಕ ಮಾಡಿದಲ್ಲಿ ಸರ್ವರಿಗೂ ನ್ಯಾಯ ಒದಗಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT