ನಿಮಗ್ಯಾಕ್ರೀ ನನ್ನ ವಿಷಯ

7

ನಿಮಗ್ಯಾಕ್ರೀ ನನ್ನ ವಿಷಯ

Published:
Updated:
ನಿಮಗ್ಯಾಕ್ರೀ ನನ್ನ ವಿಷಯ

ಮದುವೆ ವಿಚಾರ ಮಾತನಾಡಿದರೆ ಸಾಕು ಬಾಲಿವುಡ್‌ ನಟಿ ತಬುಗೆ ಇರಿಸುಮುರಿಸು. ‘ನನ್ನ ವೈಯಕ್ತಿಕ ಬದುಕು ಸಾರ್ವಜನಿಕ ಆಸ್ತಿಯಲ್ಲ’ ಎನ್ನುವುದು ಅವರು ನಂಬಿಕೆ.

ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಆ್ಯಂಗ್‌ ಲೀ(ಲೈಫ್‌ ಆಫ್‌ ಪೈ) ಅವರು ತಬು ಬಗ್ಗೆ ಪ್ರತಿಬಾರಿ ಮಾತನಾಡುವಾಗಲೂ ‘ಆಕೆಯದ್ದು ಅಮೂಲ್ಯ ವ್ಯಕ್ತಿತ್ವ’ ಎಂದು ಖುಷಿಪಡುತ್ತಾರೆ. ಸದ್ಯದ ಮಟ್ಟಿಗೆ ತಬು ಅವರ ಹೆಸರು ಆ್ಯಂಗ್‌ ಲೀ ಜತೆಗೆ ತಳುಕು ಹಾಕಿಕೊಂಡಿರುವುದರಿಂದ ಈ ಹೇಳಿಕೆಗೆ ಇನ್ನಿಲ್ಲದ ಮಹತ್ವ.

‘ನಿಮಗೆ ಮದುವೆಯಾಗಬೇಕು ಅಂತ ಅನಿಸುವುದೇ ಇಲ್ಲವೇ?’ ಎಂದು ಮಾಧ್ಯಮಪ್ರತಿನಿಧಿಯೊಬ್ಬರು ಈಚೆಗಷ್ಟೇ ತಬು ಅವರನ್ನು ಪ್ರಶ್ನಿಸಿದ್ದರು. ‘ಇಂಥ ಪ್ರಶ್ನೆ ಯಾಕ್ರೀ ಕೇಳ್ತೀರಿ? ನನಗಂತೂ ಈ ಪ್ರಶ್ನೆಗೆ ಉತ್ತರಿಸುವುದು ಸಖತ್ ಬೋರಿಂಗ್ ಅನ್ಸುತ್ತೆ. ಬೇರೆ ಏನಾದ್ರೂ ಕೇಳಿ.

ಮದುವೆಯಾಗುವುದು, ಬಿಡುವುದು ಯಾರದ್ದಾದರೂ ಸಾಮರ್ಥ್ಯಕ್ಕೆ ಮಾನದಂಡವಾ? ಮಹಿಳೆಯರನ್ನು ಇಂಥ ಪ್ರಶ್ನೆಗಳಿಂದ ಚುಚ್ಚುವ ನಿಮಗೆ ಪುರುಷರ ಬಗ್ಗೆ ಮಾತ್ರ ತಟಸ್ಥ ಧೋರಣೆ. ನಾನಂತೂ ಯಾರಿಗೂ ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ’ ಎಂದು ’ ಎಂದು ತಬು ಅಸಮಾಧಾನ ಹೊರಹಾಕಿದ್ದರು.

ತಮ್ಮ ಖಾಸಗಿ ಬದುಕನ್ನು ಗೌಪ್ಯವಾಗಿ ಇರಿಸಿಕೊಳ್ಳುವು ದರ ಜೊತೆಗೆ ಬಾಲಿವುಡ್‌ನ ವಿವಾದ ಗಳಿಂದಲೂ ಅಂತರ ಕಾಯ್ದು ಕೊಂಡಿದ್ದಾರೆ. ‘ಶಾಲೆಯಲ್ಲಿ ದ್ದಾಗಲೂ ಅಷ್ಟೇ ನಾನು ಯಾರೊಂದಿಗೂ ಜಗಳ ಮಾಡ್ತಿರಲಿಲ್ಲ. ಈಗಲೂ ನನಗೆ ಜಗಳಗಳು ಇಷ್ಟವಾಗಲ್ಲ. ಪ್ರತಿಕ್ರಿಯೆಗಳು ವಿವಾದಗಳನ್ನು ಮತ್ತಷ್ಟು ಬೆಳೆಸುತ್ತವೆ. ನನಗೆ ಇಷ್ಟವಾಗದ ಸಂಗತಿಯ ಬಗ್ಗೆ ನಾನು ಮಾತನಾಡಲ್ಲ’ ಎನ್ನುವುದು ಅವರ ನಿಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry