ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ಆರಂಭಿಸಿ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ದೇಶದಾದ್ಯಂತ ಗೋ ಸಂರಕ್ಷಣ ಸಂಘಟನೆಗಳು ಕೆಲಸ ಮಾಡುತ್ತಿರುವುದು ಸರಿಯಷ್ಟೆ. ಇದಕ್ಕೆ ಪೂರಕವಾಗಿ ನನ್ನ ಸಲಹೆ:

ಬೀಡಾಡಿ ದನಗಳ ಸಂಖ್ಯೆ ಹಳ್ಳಿಗಳಲ್ಲಿ ಜಾಸ್ತಿ ಆಗುತ್ತಿದೆ. ಆರ್ಥಿಕವಾಗಿ ಲಾಭ ತರದ ದನಗಳನ್ನು ಸಾಕುವುದು ರೈತರಿಗೆ ಕಷ್ಟವಾಗುವುದರಿಂದ ಅವು ಬೀಡಾಡಿ ದನಗಳಾಗುತ್ತವೆ. ಇವುಗಳ ಉಳಿವಿಗಾಗಿ ‘ಕ್ಯಾತನ ಮಕ್ಕಿ’ ಯಂತೆ ಅಲ್ಲಲ್ಲಿ ಬಯಲು ಗೋಶಾಲೆಗಳು ಪ್ರಾರಂಭ ಆಗಬೇಕು. ಅಲ್ಲಿ ನಿರ್ವಾಹಕರಿಗೆ ವೇತನ ನೀಡಬೇಕು. ಅಲ್ಲಿ ಗೊಬ್ಬರ ತಯಾರಿಸಿ ಮಾರಾಟ ಮಾಡಬೇಕು.

ಜಾನುವಾರು ಗಂಜಲ, ಸಗಣಿ ಖರೀದಿಸಿ ಮಾರುವ ವ್ಯವಸ್ಥೆ ತಾಲ್ಲೂಕು ಮಟ್ಟದಲ್ಲಿ ಆಗಬೇಕು. ಇದರಿಂದ ಜನರಿಗೆ ಆರ್ಥಿಕವಾಗಿ ಲಾಭವಾಗುವುದರ ಜೊತೆಗೆ ಜಾನುವಾರು ಉಳಿವಿಗೂ ಸಹಾಯ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT